Header Ads
Header Ads
Breaking News

ಜೂನ್ ೧೭, ಮಂಗಳೂರು ಸಹೋದಯ, ನಾರಾಯಣ ಗುರು ಅರಿವು ಅಭಿಯಾನ


ನಾರಾಯಣ ಗುರು ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಪೇರೂರಿನ ತುಳು ಧರ್ಮ ಸಂಶೋಧನಾ ಕೇಂದ್ರಗಳು ಸೇರಿ ಜೂನ್ ೧೭ರ ಶನಿವಾರ ಸಂಜೆ ೪ ಗಂಟೆಗೆ ಬಲ್ಮಠದ ಸಹೋದಯ ಹಾಲ್‌ನಲ್ಲಿ ಗುರುವಿನ ಅರಿವು ಕಜ್ಜವನ್ನು ಹಮ್ಮಿಕೊಂಡಿದ್ದವು.
ಪೇರೂರು ಜಾರು ಅವರ ಗುರುಕುಲೆ ಗುರು ನಾರಾಯಣ ಪುಸ್ತಕದ ಮೇಲೆ ಮಂಥನ ನಡೆಯಿತು. ಮೊದಲಿಗೆ ನಾರಾಯಣ ಗುರು ಅಧ್ಯಯನ ಪೀಠದ ಮುದ್ದು ಮೂಡುಬೆಳ್ಳೆಯವರು ಸ್ವಾಗತಿಸಿ, ಪೇಜಾರ ಗುರುಕುಲೆ ಗುರು ನಾರಾಯಣ ಒಂದು ರೀತಿಯಲ್ಲಿ ಮಾಹಿತಿ ಪೂರಕವಾದುದು. ಪೇಜಾರ ಚಿಕ್ಕ ಪುಸ್ತಕಗಳು ವಿಷಯದಲ್ಲಿ ದೊಡ್ಡವಿದ್ದವು; ಈ ಗುರು ಪುಸ್ತಕ ಅತಿ ವಿಫುಲ ಮಾಹಿತಿಯದು ಎಂದರು.
ಮಲಾರ್ ಜಯರಾಮ ರಯ್ ಗುರುಕುಲೆ ಗುರು ಪುಸ್ತಕದ ಬಗೆಗೆ ಮಾಹಿತಿ ನೀಡಿ ಇದು ಮಹಾ ಕಾವ್ಯದ ಸಕಲ ಲಕ್ಷಣಗಳಿರುವ ಕೃತಿ, ಓದುತ್ತ ನಡೆದಂತೆ ಕುತೂಹಲ ಕೆರಳಿಸುವ ಲಕ್ಷಣ ಇದರದ್ದು ಎಂದು ಮುಂದುವರಿದು ನಾರಾಯಣ ಗುರುಗಳ ತಾಯಿ ಮಗನ ಸಂಭಾಷಣೆ, ಗುರುಗಳ ತಪಸ್ಸಿನ ವೇಳೆ ನಡೆದ ಬೇಟೆಯ ಸನ್ನಿವೇಶಗಳನ್ನು ಓದಿ ಹೇಳಿದರು.
ಪ್ರತಿಕ್ರಿಯೆಯಲ್ಲಿ ಮಾತನಾಡಿದ ಎನ್. ಪಿ. ಶೆಟ್ಟಿಯವರು ಹಲವಾರು ಪದ್ಯಗಳ ಸಾಲುಗಳನ್ನು ಪುಟ ಪುಟವಾಗಿ ಸ್ಪಷ್ಟಪಡಿಸಿ ಪೇಜಾ ಕಾವ್ಯದಲ್ಲಿ ತುಳಿವ ಹಾದಿ ಸದಾ ಜನಜಾಡಿನದು ಎಂದರು. ಬಿ. ಎಂ. ರೋಹಿಣಿಯವರು ಗುರು ದಾರಿ ಸರ್ವರ ದಾರಿಯಾಗಲಿ ಎಂದರು. ಮಂಗಳೂರು ವಿಶ್ವವಿದ್ಯಾನಿಲಯದ ಪ್ರಭಾಕರ ನೀರುಮಾರ್ಗ ಮಾತನಾಡಿ ಮತ್ತೆ ಮತ್ತೆ ಓದಿದರೆ ಹೊಸ ಹೊಸ ಅರ್ಥವನ್ನು ನೀಡುವ ಗುರು ಕಾವ್ಯವನ್ನು ಪೇರೂರು ಜಾರು ನೀಡಿದ್ದಾರೆ. ಇದು ನಾಡಿನ ಮೂಲೆ ಮೂಲೆ ಹರಡಬೇಕು ಎಂದರು. ಪ್ರವೀಣ್ ಶೆಟ್ಟಿಯವರು ಮಾತನಾಡಿ ಅಂತರಜಾಲದಲ್ಲೇ ಪೇರೂರು ಜಾರುರವರ ಈ ಕೃತಿ ಓದಿದ್ದೇನೆ. ಗುರುಗಳ ಬಗೆಗೆ ಇಂಥ ಒಂದು ಪುಸ್ತಕ ಬಂದೇ ಇಲ್ಲ. ಆದರೆ ಕೆಲವರು ಪೇಜಾ ಒಲವಿನ ಬಗೆಗೆ ರಾಜಕೀಯ ಮಾಡುತ್ತಿದ್ದಾರೆ, ಆದರೆ ಇದು ಗುರುಗಳ ನಿಜ ಮಾಹಿತಿಯಿರುವ ಪುಸ್ತಕ ಎಂದರು.
ಕೆಎಸ್‌ಡಿ ನಿವೃತ್ತ ಧರ್ಮಾಧ್ಯಕ್ಷರಾದ ಡಾ. ಸಿ. ಎಲ್. ಪುರ್ಟಾಡೊ ಅಧ್ಯಕ್ಷರ ಪೀಠದಿಂದ ಮಾತನಾಡಿ ಬಾಸೆಲ್ ಮಿಶನ್‌ರವರ ಸೇವೆ ಮತ್ತು ನಾರಾಯಣ ಗುರುಗಳ ಸೇವಾ ಸಮೀಕರಣವನ್ನು ಸ್ವಾರಸ್ಯಕರವಾಗಿ ವಿವರಿಸಿದರು. ಅನಂತರ ಮುದ್ದು ಮೂಡುಬೆಳ್ಳೆ ಮತ್ತು ಪೇರೂರು ಜಾರು ಗುರುಗಳ ಗುರು ಪುಸ್ತಕದಿಂದ ಕೆಲವು ಪದಗಳನ್ನು ಓದಿದರು.
ಮೊದಲಿಗೆ ರಮಾನಾಥ ಕೋಟೆಕಾರ್ ಗುರು ಪದ ಹಾಡಿದರೆ, ಬೆನೆಟ್ ಅಮ್ಮಣ್ಣ ನಿರ್ವಹಣೆ ಮಾಡಿದರು. ವಾಸುದೇವ ಬೋಳೂರು, ಮೆಲ್ವಿಲ್ ಪಿಂಟೋ, ದಿನೇಶ್ ಮೂಲ್ಕಿ, ತಿಮ್ಮಪ್ಪ ಪೂಜಾರಿ ಮೊದಲಾದವರು ಭಾಗವಹಿಸಿದ್ದರು.

Related posts

Leave a Reply