Header Ads
Header Ads
Breaking News

ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನಾಚರಣೆ

ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ರಕ್ತ ನಿಧಿ ಸಮಿತಿಯಿಂದ ವಿಶ್ವ ರಕ್ತದಾನಿಗಳ ದಿನಾಚರಣೆಯು ಜೂನ್ 14ರಂದು ವೆನ್‌ಲಾಕ್ ಸರಕಾರಿ ಆಸ್ಪತ್ರೆ ಬಳಿಯ ಐಎಂಎ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ರೆಡ್‌ಕ್ರಾಸ್ ಸೊಸೈಟಿಯ ವೈಸ್ ಚೇರ್‌ಮ್ಯಾನ್ ಡಾ. ಸುಶೀಲ್ ಜತ್ತನ್ನ ಹೇಳಿದರು.ಅವರು ಮಂಗಳೂರಿನ ಪತ್ರಿಕಾಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ನಡೆಸಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಕಾರ್ಯಕ್ರಮ ಉದ್ಟಾಟಿಸಲಿದ್ದು, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮುಖ್ಯ ಅತಿಥಿಯಾಗಿರುವರು. ದಕ್ಷಿಣ ಕನ್ನಡ ರೆಡ್‌ಕ್ರಾಸ್ ಸೊಸೈಟಿ ಚೇರ್‌ಮ್ಯಾನ್ ಶಾಂತರಾಮ ಶೆಟ್ಟಿ ಅಧ್ಯಕ್ಷತೆ ವಹಿಸುವರು ಎಂದರು. ಈ ವರ್ಷದ ರಕ್ತದಾನಿಗಳ ದಿನಾಚರಣೆಯ ಘೋಷ ವಾಕ್ಯ ಬೇರೊಬ್ಬರಿಗಾಗಿ ರಕ್ತದಾನ ಮಾಡಿ ಜೀನವನ್ನು ಹಂಚಿಕೊಳ್ಳಿ ದಾನ ಮಾಡಿದ ರಕ್ತದ ಪ್ರತಿಯೊಂದು ಘಟಕವೂ ಕನಿಷ್ಠ ಮೂರು ಜೀವಗಳನನ್ನು ಉಳಿಸುತ್ತದೆ. ಈ ಬಾರಿಯ ರಕ್ತದಾನ ಶಿಬಿರದಲ್ಲಿ ಕಳೆದ ವರ್ಷದಲ್ಲಿ ಗರಿಷ್ಟವಾಗಿ ೫ ಬಾರಿ ರಕ್ತದಾನ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಗೌರವಿಸಲಾಗುತ್ತದೆ ಎಂದರು.ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಟೆಕ್ನಿಕಲ್ ಸೂಪರ್ ವೈಸರ್ ಎಡ್ವರ್ಡ್ ವಾಸ್ ರೆಡ್‌ಕ್ರಾಸ್‌ನ ಪ್ರಾಜೆಕ್ಟ್ ಮೇನೇಜರ್ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.

Related posts

Leave a Reply