
ಜೆ.ಎಫ್ ಡಿಸೋಜಾ ಅತ್ತಾವರ ಬರೆದಿರುವ 14ನೇ ಮಕ್ಕಳ ಕಥಾ ಪುಸ್ತಕ ರೊಬಿನ್ ಸನ್ ಕ್ರುಸೋ ನೂತನ ಪ್ರತಿಯನ್ನು ಚಾರ್ಟೆಡ್ ಅಕೌಂಟೆಂಟ್ ಹಾಗೂ ಕೊಂಕಣಿ ಅಭಿಮಾನಿ ಕೊಂಕಣಿ ಲೀಗ್ ಸಂಘದ ಸಂಘಟಕ ರಿಚರ್ಡ್ ಮೊರಾಸ್ ಅವರು ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಬಿಡುಗಡೆಗೊಳಿಸಿದ್ರು. ಈ ವೇಳೆ ಮಾತನಾಡಿದ ರಿಚರ್ಡ್ ಮೊರಾಸ್ ಅವ್ರು, ಜೆ.ಎಫ್ ಡಿಸೋಜಾ ಅವ್ರ ಪುಸ್ತಕಗಳ ಬಗ್ಗೆ ಮಾಹಿತಿ ನೀಡಿದ್ರು. ಈ ವೇಳೆ ಕೊಂಕಣಿ ಸಾಹಿತಿ ಜೆ.ಎಫ್ ಡಿಸೋಜಾ ಅತ್ತಾವರ, ಟ್ರೆಸ್ಸಿ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.