Header Ads
Header Ads
Breaking News

ಜೆ.ಸಿ.ಐ. ನ ‘ಸೆಲ್ಯೂಟ್ ದಿ ಸೈಲೆಂಟ್ ವರ್ಕರ್’ ಕಾರ್ಯಕ್ರಮ

ಸಮಾಜದಲ್ಲಿ ಸುಪ್ತವಾಗಿ, ಪ್ರಾಮಾಣಿಕರಾಗಿ ಕಾರ್ಯನಿರ್ವಹಿಸುವ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸುವ ಜೆ.ಸಿ.ಐ. ನ ‘ಸೆಲ್ಯೂಟ್ ದಿ ಸೈಲೆಂಟ್ ವರ್ಕರ್’ ಎಂಬ ಕಾರ್ಯಕ್ರಮ ಗಣೇಶಪುರದಲ್ಲಿ ನಡೆಯಿತು.

ಮುಂಚೂರ್, ಶ್ರೀನಿವಾಸ ನಗರದ ನಿವಾಸಿ ಹಾಗೂ ಎಂ.ಆರ್.ಪಿ.ಎಲ್. ಮಂಗಳೂರಿನ ಫೈರ್ ಎಂಡ್ ಸೇಫ್ಟೀ ವಿಭಾಗದ ಶ್ರೀ ಪ್ರಭಾಕರ ಶೆಟ್ಟಿ ಅವರನ್ನು ಜೆ.ಸಿ.ಐ. ಗಣೇಶಪುರದ ವತಿಯಿಂದ ಸನ್ಮಾನಿಸಲಾಯಿತು. ಹಿರಿಯ ಜೇಸಿಗಳಾದ ಲಕ್ಷ್ಮೀಶ ಅಂಚನ್ ಹಾಗೂ ಶ್ರೀಶ ಕರ್ಮರನ್ ಶ್ರೀ ಪ್ರಭಾಕರ ಶೆಟ್ಟಿ ಅವರ ಪ್ರಾಮಾಣಿಕತೆ ಹಾಗೂ ಕಾರ್ಯತತ್ಪರತೆಯನ್ನು ಶ್ಲಾಘಿಸಿದರು.ಸನ್ಮಾನ ಸ್ವೀಕರಿಸಿದ ಶ್ರೀ ಪ್ರಭಾಕರ ಶೆಟ್ಟಿ ಜೆ.ಸಿ.ಐ. ಗಣೇಶಪುರದ ಸರ್ವ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭ ಜೆ.ಸಿ. ಅರುಣ್ ಕುಮಾರ್ ಜೆ.ಸಿ.ಐ. ಗಣೇಶಪುರದ ಅಧ್ಯಕ್ಷ ಜೆ.ಸಿ. ಉದಯ ಕುಮಾರ್ , ಕಾರ್ಯದರ್ಶಿ ಜೆ.ಸಿ. ಶಶಿಕುಮಾರ್, ಪೂರ್ವಾಧ್ಯಕ್ಷರಾದ ವನಿತಾ ಅಂಚನ್, ಚೇತನ್ ಅಮೀನ್, ಡಾ.ಸಂಪತ್ ಕುಮಾರ್, ಜೇಸೀರೇಟ್ ಅಧ್ಯಕ್ಷೆ ಭಾರತಿ ಶ್ರೀಶ, ಶರತ್ ಕುಮಾರ್, ಚಂದನ್ ಡಿ ಸೋಜ, ವೇಣುಗೋಪಾಲ್, ತುಷಾರ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *