Header Ads
Breaking News

ಜೈಲು ಪಾಲಾಗಿದ್ದ ನಿರಪರಾಧಿಗೆ ನೆರವಾದ ಕೆಸಿಎಫ್

ಸೌದಿ ಅರೇಬಿಯಾದ ದಮ್ಮಾಮ್‌ನಲ್ಲಿ ಮಾಡದ ತಪ್ಪಿಗೆ ಜೈಲು ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯೋರ್ವನ ನೆರವಿಗೆ ಧಾವಿಸಿ ಆತನನ್ನು ಬಂಧಮುಕ್ತಗೊಳಿಸುವಲ್ಲಿ ಕೆ.ಸಿ.ಎಫ್ ದಮ್ಮಾಂ ಝೋನಲ್ ಘಟಕ ಯಶಸ್ವಿಯಾಗಿದೆ. ಸುಮಾರು 8ತಿಂಗಳ ಹಿಂದೆ ಪೆರ್ಲ ಬದಿಯಡ್ಕ ನಿವಾಸಿ ಅಬೂಬಕ್ಕರ್ ಎಂಬವರು ದಮ್ಮಾಮ್‌ನಲ್ಲಿ ನಾಪತ್ತೆಯಾಗಿದ್ದರು. ಈ ಬಗ್ಗೆ ಕೆಸಿಎಫ್ ಮುಖಂಡರು ಹುಡುಕಾಟ ನಡೆಸಿದಾಗ ಅಬೂಬಕ್ಕರ್ ಅವರು ಯಾವುದೋ ಒಂದು ಕೇಸಿನಲ್ಲಿ ಬಂಧನಕ್ಕೊಳಗಾಗಿ ಜೈಲೊಂದರಲ್ಲಿ ಇರುವುದಾಗಿ ಮಾಹಿತಿ ಲಭಿಸಿತ್ತು. ಈ ಸಮಸ್ಯೆಯನ್ನು ಬಗೆಹರಿಸುವ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡ ಕೆಸಿಎಫ್ ತಂಡ ಅಬೂಬಕ್ಕರ್ ಅವರನ್ನು ಬಂಧಮುಕ್ತಗೊಳಿಸಲು ನಿರಂತರ ಪ್ರಯತ್ನಪಟ್ಟಿತು. ಆರು ತಿಂಗಳ ಬಳಿಕ ಅವರನ್ನು ಸೌದಿ ಕೋರ್ಟ್ ವಿಚಾರಣೆಗೊಳಪಡಿಸಿ, ನಿರಪರಾಧಿ ಎಂದು ಘೋಷಿಸಿ, ಬಂಧ ಮುಕ್ತಗೊಳಿಸಲು ಆದೇಶಿಸಿತು. ಇದರ ಫಲವಾಗಿ ಎಪ್ರಿಲ್ 24ರಂದು ಅಬೂಬಕ್ಕರ್ ಬಂಧನಮುಕ್ತರಾಗಿ ಹೊರಬಂದರು. ಈ ಸಂದರ್ಭ ಒಂದು ಉದ್ಯೋಗವನ್ನೂ ಕೆ.ಸಿ.ಎಫ್ ಕಲ್ಪಿಸಿಕೊಟ್ಟಿತು. ಕೆಸಿಎಫ್ ದಮ್ಮಾಮ್ ಘಟಕದ ಮುಖಂಡರಾದ ಮುಹಮ್ಮದ್ ಮಲೆಬೆಟ್ಟು, ಬಾಷಾ ಗಂಗಾವಳಿ ಮತ್ತಿತರರ ಈ ಮಾನವೀಯ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Related posts

Leave a Reply

Your email address will not be published. Required fields are marked *