Header Ads
Header Ads
Breaking News

ಜೋಡುಪಾಲ ಪ್ರಕೃತಿ ದುರಂತ ಪ್ರದೇಶಗಳಿಗೆ ವಿಜ್ಞಾನಿಗಳ ತಂಡ ಭೇಟಿ. ಸದ್ಯಕ್ಕೆ ವಾಸಕ್ಕೆ ಯೋಗ್ಯವಲ್ಲ. ಮಳೆ ಬಿಟ್ಟ ಬಳಿಕ ಪೂರ್ಣಪ್ರಮಾಣದ ಅಧ್ಯಯನ.

ಜೋಡುಪಾಲ, ಮದೆನಾಡು, ಎರ್ಮತ್ತಾಳ, ಮೊಣ್ಣಂಗೇರಿ ಪ್ರದೇಶಗಳಿಗೆ ಭೇಟಿ ನೀಡಿದ ಭಾರತೀಯ ಭೂ ಸರ್ವೀಕ್ಷಣಾ, ಭೂಗರ್ಭ ಶಾಸ್ತ್ರ ವಿಜ್ಞಾನಿಗಳ ತಂಡ ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ ಕೇಂದ್ರದ ನಿರ್ದೇಶಕ ಅವರೊಳಗೊಂಡ ತಂಡ ಸ್ಥಳದ ಮೂಲ ನಕ್ಷೆ ಹಿಡಿದು ಸ್ಥಳ ಗುರುತು ಪತ್ತೆ ಕಾರ್ಯ ನಡೆಸಿದರು. ಸರಕಾರದ ಆದೇಶದ ಮೇರೆಗೆ ತುರ್ತು ವರದಿ ತಯಾರಿಕೆಗೆ ಆಗಮಿಸಿದ ಈ ತಂಡ ವೈಜ್ಞಾನಿಕ ಪರಿಕರಗಳೊಂದಿಗೆ ಭೂಕುಸಿತದ ಸ್ಥಳಗಳನ್ನು ಚಿತ್ರೀಕರಣ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜ್ಞಾನಿಗಳ ತಂಡ ಈ ಪ್ರದೇಶಗಳಲ್ಲಿ ಕಾಡುನಾಶದಿಂದ ದುರಂತ ಸಂಭವಿಸಿದೆ. ಇಲ್ಲಿ ವಾಸ ಮಾಡಲು ಸದ್ಯಕ್ಕೆ ಅಪಾಯಕಾರಿ ಸ್ಥಳ. ಈ ಸಿದ್ಧಪಡಿಸಿದ ಪ್ರಾಥಮಿಕ ವರದಿಯನ್ನು ಸರಕಾರಕ್ಕೆ ಸಲ್ಲಿಸುತ್ತೇವೆ. ಮಳೆ ನಿಂತ ಬಳಿಕ ಪೂರ್ಣಪ್ರಮಾಣದಲ್ಲಿ ಅಧ್ಯಯನ ನಡೆಸಿ, ಸರಕಾರಕ್ಕೆ ವರದಿ ನೀಡಲಾಗುವುದು ಎಂದರು.ಭಾರತೀಯ ಭೂ ಸರ್ವೀಕ್ಷಣಾ, ಭೂಗರ್ಭ ಶಾಸ್ತ್ರ ವಿಜ್ಞಾನಿಗಳ ತಂಡ ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ ಕೇಂದ್ರದ ನಿರ್ದೇಶಕ, ಸುಳ್ಯ ತಹಸೀಲ್ದಾರ್ ಕುಂಞಮ್ಮ, ಪಿಡಬ್ಲ್ಯುಡಿ ಇಂಜಿನಿಯರ್ ಸಣ್ಣೇಗೌಡ, ಕಂದಾಯ ಇಲಾಖಾಧಿಕಾರಿಗಳು, ಪೋಲಿಸ್ ಅಧಿಕಾರಿಗಳು ಮತ್ತಿತರರು ಇದ್ದರು.

Related posts

Leave a Reply