Header Ads
Header Ads
Header Ads
Breaking News

ಜೋಸ್ ಆಲುಕ್ಕಾಸ್ ಜ್ಯುವೆಲ್ಲರಿಯ 53 ನೇ ಸ್ಥಾಪನಾ ದಿನಾಚರಣೆ ಗ್ರಾಹಕರಿಗೆ ಆಯೋಜಿಸಿದ ಆಫರ್‌ನಡಿ ವಿಜೇತರಿಗೆ ಬಹುಮಾನ ವಿತರಣೆ ಮಂಗಳೂರಿನ ಕೆ.ಎಸ್. ರಾವ್ ರಸ್ತೆಯ ಶೋರೂಂನಲ್ಲಿ ಕಾರ್ಯಕ್ರಮ

ಮಂಗಳೂರಿನ ಹೆಸರಾಂತ ಸ್ವರ್ಣಾಭರಣ ಮಳಿಗೆಯಾದ ಜೋಸ್ ಆಲುಕ್ಕಾಸ್ ಜ್ಯುವೆಲ್ಲರಿ 53 ನೇ ಸ್ಥಾಪನಾ ದಿನಾಚರಣೆಯ ಪ್ರಯುಕ್ತ ಸಂಸ್ಥೆಯು ಗ್ರಾಹಕರಿಗಾಗಿ 53 ದಿನಗಳ ಕಾಲ ಆಯೋಜಿಸಿದ್ದ ಆಫರ್‌ನಡಿ ಗೃಹೋಪಯೋಗಿ ವಸ್ತುಗಳ ಹಾಗೂ ಬಂಗಾರದ ನಾಣ್ಯಗಳ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.

ನಗರದ ಕೆ‌ಎಸ್ ರಾವ್ ರಸ್ತೆಯ ಶೋರೂಂನಲ್ಲಿ ನಡೆದ ಕಾರ್ಯಕ್ರಮವನ್ನು ಮಂಗಳೂರು ಮಹಾನಗರ ಪಾಲಿಕೆಯ 41 ನೇ ಸೆಂಟ್ರಲ್ ಮಾರ್ಕೆಟ್ ವಾರ್ಡಿನ ಕಾರ್ಪೊರೇಟರ್ ಪೂರ್ಣಿಮಾರವರು ಉದ್ಘಾಟಿಸಿದರು. ಬಳಿಕ ವಿಜೇತ ಗ್ರಾಹಕರಿಗೆ ಬಹುಮಾನ ವಿತರಿಸಿದರು. ಇದೇ ವೇಳೆ ಮಾತನಾಡಿದ ಅವರು, ಜೋಸ್ ಅಲುಕ್ಕಾಸ್ ಮಂಗಳೂರಿನ ಜನತೆಗೆ ಇನ್ನಷ್ಟು ಕೊಡುಗೆಗಳನ್ನು ನೀಡಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮ್ಯಾನೇಜರ್‌ಗಳಾದ ಕೆ.ಪಿ. ಆಗಸ್ಟಿನ್, ಗ್ಲಿಂಟೋ ಜೋನಿ ಉಪಸ್ಥಿತರಿದ್ದರು. ಕ್ರಿಸ್ಮಸ್ ಹಬ್ಬದ ಪ್ರಯುಕ್ತ ವಿಶಾಲ ಶ್ರೇಣಿಯ ಚಿನ್ನಾಭರಣಗಳ ನೂತನ ಸಂಗ್ರಹ ಹೊಂದಿದ್ದು, ವಿಶೇಷ ಆಫರ್‌ಗಳನ್ನು ನೀಡಲಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.

ವರದಿ: ನಾಗರಾಜ್ ಮಂಗಳೂರು

Related posts

Leave a Reply