Header Ads
Breaking News

ಜ್ಯುವೆಲ್ಲರಿ ಪಾಲುದಾರನ ವಂಚನಾ ಜಾಲ : ಮಂಜೇಶ್ವರದಲ್ಲಿ ಬಿಜೆಪಿಯಿಂದ ಉಪವಾಸ ಸತ್ಯಾಗ್ರಹ

ಜ್ಯುವೆಲ್ಲರಿ ಪಾಲುದಾರ ವಂಚನಾ ಜಾಲ ನಡೆಸಿ ವ್ಯವಸ್ಥಿತ ವಾಗಿ ಕೋಟಿ ಕೋಟಿ ಪಂಗನಾಮ ಹಾಕಿರುವ ಮಂಜೇಶ್ವರ ಶಾಸಕ ಎಂ.ಸಿ ಖಮರುದ್ದೀನ್ ರಾಜೀನಾಮೆ ನೀದಬೇಕು, ಅವರನ್ನು ಬಂಧಿಸಿ ಉನ್ನತ ತನಿಖೆಗೊಳಪಡಿಸಬೇಕು, ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಮಂಜೆಶ್ವರ ಮಂದಲ ಸಮಿತಿ ಅಧ್ಯಕ್ಷ ಮಣಿಕಂಠ ರೈ ಉಪವಾಸ ಸತ್ಯಾಗ್ರಹ ಆರಂಭಿಸಿದರು.ಹೊಸಂಗಡಿ ಪ್ರೇರಣಾ ಸಭಾಂಗಣದಲ್ಲಿ ಉಪವಾಸ ಧರಣಿ ಸತ್ಯಾಗ್ರಹ ನಡೆಸಿದರು. ವಂಚನೆಯ ಮುಖವನ್ನು ತಿಳಿಯದ ಮಂಜೆಶ್ವರದ ಜನತೆ ಮೋಸಹೋಗಿದ್ದಾರೆ. ಇದೀಗ ಇಂತಹ ವಂಚನಾ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿರುವುದಾಗಿ ಮುಖಂಡರು ಹೇಳಿದರು.ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಶ್ರೀಕಾಂತ್, ಪದ್ಮನಾಭ ಕಡಪ್ಪುರ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ನೇತಾರರದ ನವೀನ್ ರಾಜ್, ಸುರೇಶ್ ಕುಮಾರ್ ಶೆಟ್ಟಿ, ಬಾಬು ಮಾಸ್ಟರ್, ಮುರಳೀಧರ್ ಯಾದವ್, ಸಂತೋಷ  ದೈಗೋಳಿ ಸೇರಿದಂತೆ ಹಲವರು ಮಂದಿ ಪಾಲ್ಗೊಂಡರು.

Related posts

Leave a Reply

Your email address will not be published. Required fields are marked *