Header Ads
Breaking News

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬ್ರಹ್ಮಕಲಶೋತ್ಸವ : ಜ.26ರಂದು ಬಂಟ್ವಾಳದಿಂದ ಹೊರೆಕಾಣಿಕೆ ಮೆರವಣಿಗೆ

ಬಂಟ್ವಾಳ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜನವರಿ 22ರಿಂದ ಫೆಬ್ರವರಿ 3ರವರೆಗೆ ನಡೆಯುವ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಜಿಲ್ಲೆಯ ನಾನಾ ಕಡೆಗಳಿಂದ ಮೆರವಣಿಗೆ ಮೂಲಕ ಹೊರೆಕಾಣಿಕೆ ಅರ್ಪಿಸಲಾಗುತ್ತಿದ್ದು, ಜನವರಿ 26ರಂದು ಬಂಟ್ವಾಳದಿಂದ ನಡೆಯುವ ಮೆರವಣಿಗೆಗೆ ಭರದ ಸಿದ್ಧತೆ ನಡೆದಿದೆ.

ಬಂಟ್ವಾಳ ಬಿ.ಸಿ.ರೋಡಿನ ಖಾಸಗಿ ಹೋಟೆಲ್‍ನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ವಿವರಗಳನ್ನು ನೀಡಿದರು. ಜ.22ರಂದು ಶಿಬರೂರು, ಅತ್ತೂರು, ಕೊಡೆತ್ತೂರು, ಜ.23ರಂದು ಸಂಜೆ ಮಂಗಳೂರು, ಜ.24ರಂದು ಬೆಳಗ್ಗೆ ಬಪ್ಪನಾಡು, ಉಳ್ಳಾಲ ಸಂಜೆ ಬಜಪೆ, ಜ.25ರಂದು ಕಾಸರಗೋಡು, ಸುಳ್ಯ, ಜ.26ರಂದು ಬಂಟ್ವಾಳ ತಾಲೂಕು, ಜ.27ರಂದು ಬೆಳಗ್ಗೆ ಪುತ್ತೂರು , ಸಂಜೆ ಕಾವೂರು, ಕಳತ್ತೂರು, ಜ.28ರಂದು ಉಡುಪಿ ಮತ್ತು ಜ.29ರಂದು ಬೆಳ್ತಂಗಡಿಯಿಂದ ಹೊರೆಕಾಣಿಕೆ ಬರಲಿದೆ ಎಂದು ಹೇಳಿದ ಸ್ವಾಮೀಜಿ, ಜ.26ರಂದು ಬಂಟ್ವಾಳದಿಂದ ಹೊರಡುವ ಹೊರೆಕಾಣಿಕೆ ಮೆರವಣಿಗೆಯನ್ನು ಔಚಿತ್ಯಪೂರ್ಣವಾಗಿಸಬೇಕು, ದೇವತಾ ಸೇವೆ ಮತ್ತು ಸಮರ್ಪಣಾ ಮನೋಭಾವದಿಂದ ಆಗಮಿಸುವ ಭಕ್ತರಿಗೆ ಆ ದಿನ ಕ್ಷೇತ್ರಕ್ಕೆ ಬಿ.ಸಿ.ರೋಡಿನಿಂದ ಉಚಿತ ಬಸ್ ವ್ಯವಸ್ಥೆಯೂ ಇದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಚಂದ್ರಹಾಸ ಶೆಟ್ಟಿ ರಂಗೋಲಿ, ಭುವನೇಶ್ ಪಚ್ಚಿನಡ್ಕ, ಬೊಂಡಾಲ ಸಚ್ಚಿದಾನಂದ ಶೆಟ್ಟಿ, ತಾರಾನಾಥ ಕೊಟ್ಟಾರಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *