Header Ads
Header Ads
Header Ads
Breaking News

ಟಾರ್ಗೆಟ್ ಗ್ರೂಪ್‌ನ ಇಲಿಯಾಸ್ ಬರ್ಬರ ಹತ್ಯೆ ಮಂಗಳೂರಿನ ಜಪ್ಪಿನಮೊಗರು ಕುಡ್ಪಾಡಿಯಲ್ಲ್ಲಿ ಘಟನೆ ಕಾರಿನಲ್ಲಿ ಬಂದ ತಂಡದಿಂದ ಕೃತ್ಯ

 

ಮಂಗಳೂರಿನ ಟಾರ್ಗೆಟ್ ಗ್ರೂಪ್‌ನ ನಟೋರಿಯಸ್ ರೌಡಿ ಇಲ್ಯಾಸ್‌ನನ್ನು ಬರ್ಬರವಾಗಿ ಹತ್ಯೆಗೈಯ್ದಿದ್ದಾರೆ. ಇಂದು ಬೆಳಗ್ಗೆ 9 ಗಂಟೆಯ ವೇಳೆಗೆ ಚಾಕುವಿನಿಂದ ಇರಿದು ಇಲ್ಯಾಸ್‌ನನ್ನು ಹತ್ಯೆಗೈಯಲಾಗಿದೆ ಎಂದು ತಿಳಿದು ಬಂದಿದ್ದು, ಗ್ಯಾಂಗ್‌ವಾರ್ ನಲ್ಲಿ ಹತ್ಯೆ ಗೈಯಲಾಗಿದೆ ಎಂದು ಹೇಳಲಾಗಿದೆ.  ಕಳೆದ 2 ದಿನಗಳ ಹಿಂದೆ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಇಲ್ಯಾಸ್ ಜಪ್ಪಿನಮೊಗರು ಮನೆಯಲ್ಲಿದ್ದ ವೇಳೆ ದುಷ್ಕರ್ಮಿಗಳ ಗುಂಪು ದಾಳಿ ನಡೆಸಿದೆ. ದಾಳಿ ವೇಳೆ ಇಲ್ಯಾಸ್ ಎದೆಗೆ ಇಬ್ಬರು ದುಷ್ಕರ್ಮಿಗಳು ಇರಿದು ಪರಾರಿಯಾಗಿದ್ದು, ಆತನನ್ನು ಕೂಡಲೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪ್ರಕರಣ ದಾಖಲಿಸಿಕೊಂಡು ಬಿಗಿ ಭದ್ರತೆ ಕೈಗೊಂಡಿದ್ದಾರೆ.

Related posts

Leave a Reply