Header Ads
Breaking News

ಟೀಕೆ ಮಾಡುವ ಬದಲು ಕೆಲಸ ಮಾಡಿ-ಸುಳ್ಯದ ಶಾಸಕ ಆಂಗಾರರಿಗೆ ಕಾಂಗ್ರೆಸ್‌ ಪ್ರತ್ಯುತ್ತರ

ಸುಳ್ಯ ಶಾಸಕ ಅಂಗಾರರು 6 ಬಾರಿ ಈ ಕ್ಷೇತ್ರದಿಂದ ಜನಾದೇಶ ಪಡೆದು ಆರಿಸಿ ಬಂದಿದ್ದಾರೆ. ಅವರು ಮಾಡಬೇಕಾದ ಕೆಲಸವನ್ನು ಮಾಡದೇ ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಾ ಹಿಟ್ ಆಂಡ್ ರನ್ ಮಾಡುತ್ತಿದ್ದಾರೆ. ಶಾಸಕರೇ ನಾವು ನಿಮ್ಮನ್ನು ಟೀಕಿಸುವುದಿಲ್ಲ. ನೀವು ಕೂಡಾ ನಮ್ಮ ಪಕ್ಷವನ್ನು ದೂರುವುದಕ್ಕಿಂತ ಬದಲು ಕೆಲಸ ಮಾಡಿ ತೋರಿಸಿ ಎಂದು ಕಾಂಗ್ರೆಸ್ ಸವಾಲೊಡ್ಡಿದೆ.

ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈಯವರು, ಮೊನ್ನೆ ಅಜ್ಜಾವರದಲ್ಲಿ ನಡೆದ ರಸ್ತೆ ಗುದ್ದಲಿಪೂಜೆ ಕಾರ್ಯಕ್ರಮದಲ್ಲಿ ಶಾಸಕರು ಮತ್ತು ಸಂಸದರು ಕಾಂಗ್ರೆಸ್‌ನ್ನು ಟೀಕೆ ಮಾಡಿದ್ದು ಗಮನಕ್ಕೆ ಬಂದಿದೆ. ಅವರು ಟೀಕೆ ಮಾಡುತ್ತಾರೆಂದು ನಾವು ಆ ರೀತಿ ಮಾಡಲು ಹೋಗುವುದಿಲ್ಲ. ಹಳ್ಳಿಯಿಂದ ಡೆಲ್ಲಿವರೆಗೆ ಅವರದೇ ಪಕ್ಷ ಆಡಳಿತದಲ್ಲಿದ್ದರೂ ಅವರಿಕೆ ಕೆಲಸ ಮಾಡಲು ಸಾಧ್ಯವಾಗದಿರುವುದರಿಂದ ನಮ್ಮನ್ನು ದೂರಿಕೊಂಡು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಶಾಸಕ, ಸಂಸದರಿಗೆ ವರ್ಷಕ್ಕೆ ಅವರ ಕ್ಷೇತ್ರಕ್ಕೆ ಬರುವ ಅನುದಾನ ವನ್ನು ತಂದದ್ದು ಬಿಟ್ಟರೆ ವಿಶೇಷ ಅನುದಾನ ತಂದಿದ್ದರೆ ಅದನ್ನು ಹೇಳಲಿ ಎಂದು ಹೇಳಿದರು.ಕಾಂಗ್ರೆಸ್ ಎವತ್ತು ಶಾಸಕರನ್ನು ದೂರುವುದಿಲ್ಲ. ಆದರೆ ಕೆಲಸ ಆಗದೇ ಇರುವುದನ್ನು ಹೇಳಬೇಕಾಗುತ್ತದೆ. ಸುಳ್ಯದ ತ್ಯಾಜ್ಯ ವಿಲೇವಾರಿಗೆ ಶಾಶ್ವತ ಮುಕ್ತಿ ದೊರೆತಿಲ್ಲ. ನಗರ ಪಂಚಾಯತ್ ಆವರಣದಲ್ಲಿ ಕಸ ಹಾಕುವುದು ವಿಶ್ವದಲ್ಲೇ ದಾಖಲೆ. ಇದು ಶಾಸಕರ ಕಿರಿಟಕ್ಕೆ ಮತ್ತೊಂದು ಗರಿ ಇದ್ದಂತೆ ಎಂದು ಜಯಪ್ರಕಾಶ್ ರೈ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ರಾಜ್ಯ ಘಟಕ ಕಾರ್ಯದರ್ಶಿ ಎಸ್.ಸಂಶುದ್ದೀನ್, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ.ಜೆ., ತಾಲೂಕು ಅಲ್ಪ ಸಂಖ್ಯಾತರ ಘಟಕ ಅಧ್ಯಕ್ಷ ಜಿ.ಕೆ. ಹಮೀದ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *