Header Ads
Breaking News

ಡಾ. ಎ. ಸುಬ್ಬರಾವ್ ಜನ್ಮಶತಾಭ್ದಿ ಆಚರಣೆಯ ಸಮಾರೋಪ ಸಮ್ಮೇಳನ : ಹೊಸಂಗಡಿಯಲ್ಲಿ ಸಂಭ್ರಮದಿಂದ ನಡೆದ ಕಾರ್ಯಕ್ರಮ

ಮಂಜೇಶ್ವರ: ಸ್ವಾತಂತ್ರ್ಯ ಹೋರಾಟಗರ, ಉತ್ತರ ಮಲಬಾರಿನಲ್ಲಿ ಕಮ್ಯುನಿಸ್ಟ್ ಪಕ್ಷ ಕಟ್ಟಿ ಬೆಳೆಸುವಲ್ಲಿ ಸುಪ್ರಧಾನ ಪಾತ್ರ ನಿರ್ವಹಿಸಿದ ಮಾಜಿ ರಾಜ್ಯ ಸಭಾ ಸದಸ್ಯ, ಕೇರಳದ ಮಾಜಿ ಸಚಿವ, ಮಾಜಿ ಶಾಸಕ ಹಾಗೂ ಪ್ರತ್ಯೇಕವಾಗಿ ತುಳುನಾಡಿನ ಹೆಮ್ಮೆಯ ಮೌಲ್ಯಾಧಾರಿತ ರಾಜಕೀಯ ಸಿದ್ದಂತವನ್ನು ನಿಸ್ವಾರ್ಥತೆಯಿಂದ ಸಾಮಾಜಿಕ ರಂಗದಲ್ಲಿ ಅಳವಡಿಸಿಕೊಂಡ ಡಾ. ಎ. ಸುಬ್ಬರಾವ್ ರವರ ಜನ್ಮಶತಾಭ್ದಿ ಆಚರಣೆಯ ಸಮಾರೋಪ ಸಮ್ಮೇಳನ ಹೊಸಂಗಡಿಯಲ್ಲಿ ಸಂಭ್ರಮದೊಂದಿಗೆ ನೆರವೇರಿತು.ಸಿಪಿಐ ದೇಶೀಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಂಸತ್ ಸದಸ್ಯ ಪನ್ಯನ್ ರವೀಂದ್ರನ್ ಸಮ್ಮೆಳನವನ್ನು ಉದ್ಘಾಟಿಸಿದರು. ಕೇರಳ ಕಂದಾಯ ಸಚಿವ ಇ ಚಂದ್ರಶೇಖರ್ ಹಾಗೂ ಸಿಪಿಐ ರಾಜ್ಯ ನಿಯಂತ್ರಕ ಸಮಿತಿ ಅಧ್ಯಕ್ಷ ಸಿ ಪಿ ಮುರಳಿ ಸುಬ್ಬರಾವ್ ರ ಬಗ್ಗೆ ಉಪನ್ಯಾಸ ನೀಡಿದರು.ಈ ಸಂದರ್ಭ ಡಾ. ಬನಾರಿಯವರು ರಚಿಸಿದ “ ಶತಮಾನ ಶ್ರದ್ದಾಂಜಲಿ ಎಂಬ ಕವಿತೆಯ ಬಿಡುಗಡೆ ಹಾಗೂ ಬನಾರಿಯವೇ ಸ್ವತಃ ಕವಿತೆಯನ್ನು ವಾಚಿಸಿದರು.

ಬೆಳಗಾವಿ ಜಿಲ್ಲೆಯ ಬೈಲ ಹೊಂಗಲ ಬೇವಿನ ಕೊಪ್ಪದ ನಿತ್ಯನಂದ ಧ್ಯಾನ ಮಂದಿರದ ಶ್ರೀ ಶ್ರೀ ಶ್ರೀ ವಿಜಯಾನಂದ ಸ್ವಾಮೀಜಿ ಸುಬ್ಬರಾವ್ ರವರ ಜೀವನ ರೀತಿಯ ಅಪೂರ್ವ ಘಟನೆಗಳನ್ನು ಸ್ಮರಿಸಿ ಮಾತನಾಡಿದರು. ಮಂಜೇಶ್ವರದ ಕೇಶವ ಇಡ್ಯ ರವರಿಗೆ ಸನ್ಮಾನ ಹಾಗೂ ಅವರ ತಂಡಕ್ಕೆ ಗೌರಾರ್ಪಣೆ ನಡೆಯಿತು. ಬಳಿಕ ಇಂಚರ ತಂಡದ ಸಂಗೀತ ಸಂಧ್ಯಾ ಕಾರ್ಯಕ್ರಮ ನಡೆಯಿತು.. ಈ ಸಂದರ್ಭ ವೇದಿಕೆಯಲ್ಲಿ ನೇತಾರರಾದ ಗೋವಿಂದನ್ ಪಳ್ಳಿಕಾಪಿಲ್, ಟಿ ಕೃಷ್ಣನ್, ಬಂಗಳಂ ಪಿ. ಕುಂಞ ಕ್ರಷ್ಣನ್, ಕೆ ವಿ ಕ್ರಷ್ಣನ್, ಭಾರ್ಗವಿ ವಿಜಯ ಕುಮಾರ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.

Related posts

Leave a Reply

Your email address will not be published. Required fields are marked *