

ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ಉತ್ತರ ಮಂಡಲದ ಎಸ್ಸಿ ಮೋರ್ಚಾದ ವತಿಯಿಂದ ಡಾ. ಬಿ. ಆರ್. ಅಂಬೇಡ್ಕರ್ ರವರ 64ನೇ ಮಹಾ ಪರಿನಿರ್ವಾಣ ದಿನಾಚರಣೆ ಕಾವೂರಿನ ಗುರು ವೈದ್ಯನಾಥ ಬಬ್ಬುಸ್ವಾಮಿ ದೈವಸ್ಥಾನದ ಸಭಾಭವನದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಬಿಜೆಪಿ ಮಂಡಲ ಉಪಾಧ್ಯಕ್ಷರಾದ ಬಬಿತ ರವೀಂದ್ರ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಿಜೆಪಿ ಮಂಡಲದ ಸದಸ್ಯರಾದ ಸುಮಂಗಳ ರಾವ್ ಅವರು ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಾನತೆಗಾಗಿ ಹೋರಾಟ ಮಾಡಿದವರು. ಅವರ ಹೋರಾಟದಿಂದ ಇವತ್ತು ನಾವಿಂದು ಎಲ್ಲರೂ ಒಟ್ಟಾಗಿಯೇ ಇದ್ದೇವೆ. ನಮ್ಮ ನಡುವೆ ಜಾತಿ ಎಂಬ ಬೇಧಭಾವ ಇರಬಾರದು ಎಂದು ಹೇಳಿದರು. ಮುಲ್ಕಿ ಕಾರ್ನಡ್ನ ಪದವಿಪೂರ್ವ ಕಾಲೇಜಿ ಉಪನ್ಯಾಸಕರಾದ ವಾಸುದೇವ ಬೆಳ್ಳೆ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.ಈ ಸಂದರ್ಭ ಮಂಗಳೂರು ನಗರ ಉತ್ತರ ಮಂಡಲದ ಎಸ್ಸಿ ಮೋರ್ಚಾದ ಆನಂದ ಪಾಂಗಳ,ಸದಸ್ಯರಾದ ಗಾಯತ್ರಿ ರಾವ್, ಮನೋಜ್ ಕುಮಾರ್, ಅಶೋಕ್ ವಾಮಂಜೂರು, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.