Header Ads
Breaking News

ಡಾ. ಶಾಂತರಾಮ ಶೆಟ್ಟಿ ಬರೆದ ಕೃತಿಗಳ ಬಿಡುಗಡೆ : ದೇರಳಕಟ್ಟೆಯ ಎ.ಬಿ. ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯದಲ್ಲಿ ಕಾರ್ಯಕ್ರಮ

ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ, ಹಿರಿಯ ಆರ್ಥೋಪೆಡಿಕ್ ಸರ್ಜನ್ ಡಾ. ಶಾಂತಾರಾಮ ಶೆಟ್ಟಿ ಅವರು ಬರೆದ ಮೂರು ಕೃತಿಗಳ ಬಿಡುಗಡೆ ಸಮಾರಂಭ ದೇರಳಕಟ್ಟೆಯ ಎ.ಬಿ. ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಮಹಾವಿದ್ಯಾಲಯದ ಹೊಸ ಸಭಾಂಗಣದಲ್ಲಿ ನಡೆಯಿತು.

ಸುಪ್ರೀಂ ಕೋರ್ಟ್ ನ ವಿಶ್ರಾಂತ ನ್ಯಾಯಾಧೀಶ ಎನ್. ಸಂತೋಷ್ ಹೆಗ್ಡೆ ಅವರು ವಿನಯ್ ಹೆಗ್ಡೆ ಅವರ ಜೀವನ ಚರಿತ್ರೆಯನ್ನು ಒಳಗೊಂಡಿರುವ “ಪುರುಷ ಶ್ರೇಷ್ಟ ನಿಟ್ಟೆ ವಿನಯ ಹೆಗ್ಡೆ” ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ ಡಾ. ಶಾಂತಾರಾಮ ಶೆಟ್ಟಿ ಅವರು ರಚಿಸಿದ ಎಲ್ಲ ಕೃತಿಗಳು ಸಮಗ್ರ ಅಧ್ಯಯನದಿಂದ ಕೂಡಿದ್ದು ಮೊಳಹಳ್ಳಿ ನನ್ನೂರು ಚೆನ್ನೂರು ಪುಸ್ತಕ ಕುಟುಂಬ ಪದ್ಧತಿಯಲ್ಲಿ ವಾಸಿಸುವವರಿಗೆ ತುಂಬ ಉಪಯುಕ್ತವಾಗಲಿದೆ. ಆರ್ಥೋಪೆಡಿಕ್ ರೋಗಿಗಳಿಗೆ ಯೋಗ ಯಾವ ರೀತಿ ಸಹಕಾರಿ ಎಂಬುದನ್ನು ವಿವರಿಸಿರುವ ಆರ್ಥೋಪೆಡಿಕ್ಸ್ ಆವ್ಯಂಡ್ ಯೋಗ ಪುಸ್ತಕ ಕೇವಲ ಪುಸ್ತಕವಾಗಿರದೆ ರೋಗಿಗಳಿಗೆ ಬಹುದೊಡ್ಡ ಉಪಯೋಗವಾಗಲಿದೆ ಎಂದು ಹೇಳಿದರು.

ಪುರುಷ ಶ್ರೇಷ್ಠ ವಿನಯ ಹೆಗ್ಡೆ ಪುಸ್ತಕವನ್ನು ಸಂತೋಷ್ ಹೆಗ್ಡೆ, ಮೊಳಹಳ್ಳಿ ನನ್ನೂರು ಚೆನ್ನೂರು- ನನ್ನ ಮನೆ ಪಠೇಲರ ದೊಡ್ಡಮನೆ ಕೃತಿಯನ್ನು ಡಾ.ಬಿ.ಎ. ವಿವೇಕ್ ರೈ ಹಾಗೂ ಆಂಗ್ಲ ಭಾಷೆಯಲ್ಲಿ ಬರೆದ “ಆರ್ಥೋಪೆಡಿಕ್ ಪೇಷೆಂಟ್ ಆವ್ಯಂಡ್ ಯೋಗ” ಕೃತಿಯನ್ನು ವಿನಯ್ ಹೆಗ್ಡೆ ಬಿಡುಗಡೆಗೊಳಿಸಿ ಮಾತನಾಡಿ ಮುಂದಿನ ದಿನಗಳಲ್ಲಿ ಡಾ. ಶಾಂತಾರಾಮ ಶೆಟ್ಟಿ ಅವರ ಜೊತೆಗೂಡಿ ಮೊಳಹಳ್ಳಿಯ ಸಮೀಪ ಒಂದು ಆಸ್ಪತ್ರೆ ತೆರೆಯಲಿದ್ದೇವೆ. ಆ ಆಸ್ಪತ್ರೆ ತೆರೆಯುವುದರ ಹಿಂದೆ ಬಡ ರೋಗಿಗಳಿಗೆ ಚಿಕಿತ್ಸೆ ಒದಗಿಸುವುದೇ ಮುಖ್ಯ ಗುರಿ ಇದೆ ಎಂದು ಹೇಳಿದರು.

ಮೊಳಹಳ್ಳಿ ನನ್ನೂರು ಚೆನ್ನೂರು- ನನ್ನ ಮನೆ ಪಠೇಲರ ದೊಡ್ಡಮನೆ ಕೃತಿಯನ್ನು ಬಿಡುಗಡೆ ಮಾಡಿದ ಹಂಪಿ ಕನ್ನಡ ವಿವಿ ಹಾಗೂ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ್ ರೈ ಮಾತನಾಡಿ ಹಳ್ಳಿಯ ಬದುಕನ್ನು ಆ ದಿನಗಳ ಬದುಕನ್ನು ಹೋಲಿಸಿದಾಗ ಡಾ. ಶಾಂತಾರಾಮ ಶೆಟ್ಟಿ ಗ್ರಹಿಸಿದ, ಆ ಇಡೀ ಕುಟುಂಬದ ಚಿತ್ರಣದ ಪರಿ ನಿಜಕ್ಕೂ ಅದ್ಭುತ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಿಟ್ಟೆ ವಿವಿ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಆಂಗ್ಲ ಭಾಷೆಯಲ್ಲಿ ಬರೆದ “ಆರ್ಥೋಪೆಡಿಕ್ ಪೇಷೆಂಟ್ ಆವ್ಯಂಡ್ ಯೋಗ” ಕೃತಿಯನ್ನು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಪುರುಷ ಶ್ರೇಷ್ಠ ವಿನಯ ಹೆಗ್ಡೆ ಪುಸ್ತಕವನ್ನು ಕನ್ನಡ ಭಾಷೆಗೆ ತರ್ಜುಮೆ ಮಾಡಿದ ಪತ್ರಕರ್ತ ಮನೋಹರ್ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಕೃತಿಗಳ ಲೇಖಕ ಡಾ. ಶಾಂತಾರಾಮ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. 

ನಿಟ್ಟೆ ವಿವಿ ಸಹ ಕುಲಾಧಿಪತಿ ವಿಶಾಲ್ ಹೆಗ್ಡೆ, ಕುಲಪತಿ ಪ್ರೊ.. ಡಾ.ಕೆ. ಸತೀಶ್ ಕುಮಾರ್ ಭಂಡಾರಿ, ಸಹ ಕುಲಪತಿ ಪ್ರೊ..ಎಂ.ಎಸ್. ಮೂಡಿತ್ತಾಯ ಹಾಗೂ ಹಣಕಾಸು ಅಧಿಕಾರಿ ರಾಜೇಂದ್ರ,ಕ್ಷೇಮ ಎಲುಬು ಮತ್ತು ಕೀಳು ತಜ್ಞ ಡಾ. ಸಿದ್ದಾರ್ಥ್ ಶೆಟ್ಟಿ. ರಿಜಿಸ್ಟ್ರಾರ್ ಡಾ. ಅಲ್ಕಾ ಕುಲಕರ್ಣಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *