Header Ads
Breaking News

ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹ : ಉಡುಪಿ ಜಿಲ್ಲೆಯಲ್ಲಿ ಎಂದಿನಂತಿದ್ದ ಜನಜೀವನ

ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ನಡೆಯುತ್ತಿರುವ ಕರ್ನಾಟಕ ಬಂದ್ ಗೆ ಉಡುಪಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಸ್ಪಂದನೆ ವ್ಯಕ್ತವಾಗಿಲ್ಲ. ಕೃಷ್ಣನಗರಿ ಸೇರಿದಂತೆ ಉಡುಪಿ ಜಿಲ್ಲೆಯಾದ್ಯಂತ ಜನಜೀವನ ಎಂದಿನಂತೆ ಸಹಜ ಸ್ಥಿತಿಯಲ್ಲಿದೆ. ಮುಖ್ಯವಾಗಿ ಯಾವುದೇ ಸಂಘಟನೆಗಳೂ ಕೂಡ ಉಡುಪಿಯಲ್ಲಿ ಬಂದ್ ನಡೆಸುವಂತೆ ಕರೆಯನ್ನೂ ನೀಡಿಲ್ಲ.ಹೀಗಾಗಿ ಬಂದ್ ಇರುವ ವಿಷಯ ಜಿಲ್ಲೆಯ ಜನತೆಗೆ ತಿಳಿದೇ ಇಲ್ಲವೇನೋ ಎಂಬಂತೆ ಜನಜೀವನ ಎಂದಿನಂತಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಜಯಕರ್ನಾಟಕ ಸಂಘಟನೆಯ ಮುಖಂಡರು,ಸರೋಜಿ ಮಹಿಷಿ ವರದಿ ಜಾರಿ ಹೋರಾಟಕ್ಕೆ ನಮ್ಮ ಬೆಂಬಲವಿದೆ.ಆದರೆ ಬಂದ್ ಮಾಡುವುದರಿಂದ ಜನ ಸಾಮಾನ್ಯರಿಗೆ ಸಮಸ್ಯೆಯಾಗುತ್ತದೆ. ಈಗಾಗಲೇ ನೋಟ್ ಬ್ಯಾನ್ ಮತ್ತು ಜಿಎಸ್ ಟಿ ಯಿಂದ ಜನ ಹೈರಾಣಾಗಿದ್ದಾರೆ. ಮತ್ತೆ ಬಂದ್ ಆಚರಿಸುವುದರಿಂದ ಜನ ಸಾಮಾನ್ಯರ ಸಮಸ್ಯೆ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ. ರಾಜ್ಯದ ಖಾಸಗಿ ಮತ್ತು ಸರಕಾರಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೊದಲ ಪ್ರಾಶಸ್ತ್ಯ ನೀಡಲೇಬೇಕು. ಇದರಲ್ಲಿ ಎರಡು ಮಾತೇ ಇಲ್ಲ. ಐಟಿಬಟಿ, ಟೋಲ್ ಗೇಟ್ ಹೀಗೆ ಯಾವುದೆ ಸಂಸ್ಥೆಯಾದರು ಕನ್ನಡಿಗರನ್ನು ಪ್ರಥಮವಾಗಿ ಪರಿಗಣಿಸಬೇಕು.ಕನ್ನಡ ಪರ ಹೋರಾಟಕ್ಕೆ ಬೆಂಬಲ ನೀಡಲು ಜಯಕರ್ನಾಟಕ ಸದಾ ಸಿದ್ಧವಾಗಿದೆ.ಆದರೆ ಬಂದ್ ನಡೆಸಿ ಜನರಿಗೆ ತೊಂದರೆ ನೀಡಲು ನಮ್ಮ ಸಂಘಟನೆ ಬಯಸುವುದಿಲ್ಲ ಅಂತ ಜಯಕರ್ನಾಟಕ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ.

Related posts

Leave a Reply

Your email address will not be published. Required fields are marked *