Header Ads
Header Ads
Breaking News

ಡಿ.9ರಂದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಹೊನಲು ಬೆಳಕಿನ ಕ್ರೀಡಾಕೂಟ: ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಡಿ.9ರಂದು ಸಂಜೆಯಿಂದ ರಾತ್ರಿವರೆಗೆ 3316ವಿದ್ಯಾರ್ಥಿಗಳಿಂದ ಹೊನಲು ಬೆಳಕಿನ ಕ್ರೀಡಾಕೂಟ ನಡೆಯಲಿದ್ದು, ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗಡೆ ಸಹಿತ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸುಮಾರು 19ನಾನಾ ರೀತಿಯ ಕವಾಯತುಗಳು, ಪ್ರದರ್ಶನಗಳು ಇರಲಿದ್ದು, ಈ ಬಾರಿ ಸರದಾರ್ ವಲ್ಲಭಭಾಯಿ ಪಟೇಲ್, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೆನಪು, ಪೋಖರಣ್ ಅಣುಪರೀಕ್ಷೆಯ ಅಣಕು ಪ್ರದರ್ಶನ ಮತ್ತು ಶಬರಿಮಲೆ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಘಟನಾವಳಿಗಳ ಸನ್ನಿವೇಶಗಳು ಪ್ರದರ್ಶನಗೊಳ್ಳಲಿವೆ.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಗುರುವಾರ ಸಂಜೆ ಕಲ್ಲಡ್ಕದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲ ಈ ಬಗ್ಗೆ ಮಾಹಿತಿ ನೀಡಿದರು.

ಸುಮಾರು 30ಕ್ಕೂ ಅಧಿಕ ವರ್ಷಗಳಿಂದ ವಿದ್ಯಾಕೇಂದ್ರ ಕಾರ್ಯಾಚರಿಸುತ್ತಿದ್ದು, ಗುರುಕುಲ ಮಾದರಿಯ ವಿದ್ಯಾಭ್ಯಾಸ, ಭಾರತೀಯ ಸಂಸ್ಕೃತಿಯೊಂದಿಗೆ ಸಂಸ್ಕಾರವನ್ನು ಕೌಶಲಯುಕ್ತ ವಿದ್ಯಾಭ್ಯಾಸ ಮತ್ತು ಜಗತ್ತನ್ನು ಎದುರಿಸುವ ಧೈರ್ಯವನ್ನು ಒದಗಿಸುವ ಪ್ರೇರಣೆಯನ್ನು ವಿದ್ಯಾಸಂಸ್ಥೆ ನೀಡುತ್ತದೆ ಎಂದ ಅವರು, ಕ್ರೀಡಾಕೂಟವೆಂದರೆ ಸ್ಪರ್ಧೆಯಲ್ಲ. ಒಬ್ಬರಿಗೊಬ್ಬರು ಪೂರಕವಾಗಿ ಪ್ರತಿಭಾ ಪ್ರದರ್ಶನ ನೀಡುತ್ತಾರೆ. ಇವರಲ್ಲಿ20ಅಂಗವಿಕಲ, ವಿಕಲಚೇತನ ವಿದ್ಯಾರ್ಥಿಗಳೂ ಇದ್ದಾರೆ ಎಂದರು.

Related posts

Leave a Reply