Header Ads
Header Ads
Breaking News

ಡಿ.9ರಂದು ಮಂಗಳೂರಿನಲ್ಲಿ ಸಮಸ್ತ ಶರೀಅತ್ ಸಂರಕ್ಷಣಾ ರ್‍ಯಾಲಿ, ಸಮ್ಮೇಳನ

ಪುತ್ತೂರು: ದೇಶದ ಅತ್ಯುನ್ನತ ಉಲಮಾ ಸಂಘಟನೆ ಸಮಸ್ತ ಶರೀಅತ್ ಸಂರಕ್ಷಣಾ ರ್‍ಯಾಲಿ ಹಾಗೂ ಬೃಹತ್ ಸಮ್ಮೇಳನವು ಡಿ. ೯ರಂದು ನಡೆಯಲಿದೆ ಎಂದು ಪುತ್ತೂರು ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಮುಲಾರ್ ತಿಳಿಸಿದರು.

ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ. 9ರಂದು ಅಪರಾಹ್ನ2.30ರಿಂದ ಮಂಗಳೂರು ಜ್ಯೋತಿ ವೃತ್ತದ ಬಳಿಯಿಂದ ನೆಹರು ಮೈದಾನದ ವರೆಗೆ ಬೃಹತ್ ರ್‍ಯಾಲಿ ನಡೆಯಲಿದ್ದು ದ.ಕ. ಜಿಲ್ಲಾ ಖಾಝಿ ತ್ವಾಖಾ ಉಸ್ತಾದ್ ನೇತೃತ್ವದೊಂದಿಗೆ ವಿವಿಧ ಗಣ್ಯರು ಈ ರ್‍ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಸಂಜೆ 3.45ಕ್ಕೆ ನೆಹರು ಮೈದಾನದಲ್ಲಿ ಬೃಹತ್ ಶರೀಅತ್ ಸಂರಕ್ಷಣಾ ಸಮ್ಮೇಳನ ನಡೆಯಲಿದ್ದು, ಈ ಸಮ್ಮೇಳನದಲ್ಲಿ ಸಮಸ್ತದ ಅಧ್ಯಕ್ಷ ಸಯ್ಯದುಲ್ ಉಲಮಾ ಸಯ್ಯದ್ ಜಿಪ್ರಿ ಮುತ್ತು ಕೋಯ ತಂಙಳ್, ಪ್ರಧಾನ ಕಾರ್ಯದರ್ಶಿ ಶೈಖುಲ್ ಜಾಮಿಆಃ ಪ್ರೋ. ಆಲಿ ಕುಟ್ಟಿ ಮುಸ್ಲಿಯಾರ್ ಉಪಸ್ಥಿತರಿದ್ದರು.

Related posts

Leave a Reply