Header Ads
Header Ads
Breaking News

ಡೆಹ್ರಾಡೂನ್‌ನಲ್ಲಿ ಪ್ರಧಾನಿ ಮೋದಿ ಯೋಗ

ನೂರಾರು ದೈಹಿಕ ಸಮಸ್ಯೆಗಳಿಗೆ ಯೋಗ ಮದ್ದಾಗಿದ್ದು, ಯೋಗ ಎಲ್ಲರನ್ನೂ ಒಗ್ಗೂಡಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.ಅಂತಾರಾಷ್ಟ್ರೀಯ ಯೋಗ ದಿನ ಅಂಗವಾಗಿ ಉತ್ತರಾಖಂಡ್ ನ ಡೆಹ್ರಾಡೂನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ೫೫ ಸಾವಿರಕ್ಕೂ ಹೆಚ್ಚು ಜನರೊಂದಿಗೆ ಇಂದು ಯೋಗಸಾನ ಮಾಡಿದರು. ಇದಕ್ಕೂ ಮೊದಲು ಯೋಗದಿನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ’ಈ ವಿಶಾಲ ಹಾಗೂ ಸುಂದರ ಮೈದಾನದಲ್ಲಿರುವ ಎಲ್ಲರಿಗೂ ಹಾಗೂ ಎಲ್ಲಾ ಯೋಗ ಪ್ರೇಮಿಗಳಿಗೂ ನಾನು ದೈವ ಭೂಮಿ ಉತ್ತರಾಖಂಡ್ ನಿಂದ ನಾಲ್ಕನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯ ತಿಳಿಸುತ್ತೇನೆ’ ಎಂದು ಹೇಳಿದರು.

 

ಇನ್ನು ಪ್ರಧಾನಿ ಮೋದಿ ಪಾಲ್ಗೊಂಡಿರುವ ಡೆಹ್ರಾಡೂನ್ ಯೋಗ ಕಾರ್ಯಕ್ರಮದಲ್ಲಿ ಸುಮಾರು ೫೦ ಸಾವಿರಕ್ಕೂ ಅಧಿಕ ಮಂದಿ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ, ಸರ್ಕಾರ ಸುಮಾರು ೫೦ ಸಾವಿರ ಯೋಗ ಮ್ಯಾಟ್ ಗಳನ್ನು ಪೂರೈಕೆ ಮಾಡಿದ್ದು, ಸುಮಾರು ೫ ಸಾವಿರಕ್ಕೂ ಅಧಿಕ ಜನರ ಸ್ವಯಂ ಪ್ರೇರಿತರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

Related posts

Leave a Reply