
ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಡ್ರಗ್ಸ್ ದಂಧೆಯಲ್ಲಿ ಭಾಗಿಯಾದವರ ಪರೇಡ್ ನಗರದ ಪಾಂಡೇಶ್ವರದ ಪೊಲೀಸ್ ಮೈದಾನದಲ್ಲಿ ನಡೆಯಿತು.ಪರೇಡ್ ಬಳಿಕ ಮಂಗಳೂರು ಪೊಲೀಸ್ ಆಯುಕ್ತರಾದ ಶಶಿಕುಮಾರ್ ಅವರು ಮಾತನಾಡಿ, ಯುಜನತೆ ಕೆಟ್ಟ ಚಟಗಳಿಗೆ ಮಾರುಹೋಗದೆ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕಿ ಜೀವನ ರೂಪಿಸಿ. ಇರುವ ಕೇಸ್ಗಳನ್ನು ಮುಗಿಸಿಕೊಂಡು, ಒಳ್ಳೆಯ ರೀತಿಯಲ್ಲಿ ಬದುಕಿದ್ದರೆ ನಿಮ್ಮ ಮೇಲೆ ಇರುವ ಕೇಸ್ಗಳನ್ನು ಮುಕ್ತ ಮಾಡಲಾಗುವುದು. ಇಲ್ಲ ಇದನ್ನೇ ಮುಂದುವರೆಸಿದ್ದರೆ ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು. ಇನ್ನು ಪೊಲೀಸ್ ಅಧಿಕಾರಿಗಳಲ್ಲೂ ಮನವಿ ಮಾಡಿದ ಅವರು ನಿಮ್ಮ ವ್ಯಾಪ್ತಿಯನ್ನು ಡ್ರಗ್ಸ್ಗಳಿಂದ ಮುಕ್ತಗೊಳಿಸಿ ಎಂದು ಸೂಚನೆ ನೀಡಿದರು.