Header Ads
Header Ads
Header Ads
Breaking News

ತಬಲಾ ಮಾಂತ್ರಿಕ ಝಾಕೀರ್ ಹುಸೈನ್ ಕೃಷ್ಣಮಠಕ್ಕೆ ಪೇಜಾವರ ಶ್ರೀಗಳ ಆಶೀರ್ವಾದ ಪಡೆದ ಝಾಕೀರ್ ಮನಸೂರೆಗೊಂಡ ಜುಗಲ್ ಬಂದಿ ಕಾರ್ಯಕ್ರಮ

ಅಂತರಾಷ್ಟ್ರೀಯ ಕಲಾವಿದ, ತಬಲಾ ಮಾಂತ್ರಿಕ ಝಾಕೀರ್ ಹುಸೈನ್ ಕೃಷ್ಣನ ನಗರಿ ಉಡುಪಿಗೆ ಆಗಮಿಸಿ ತನ್ನ ತಬಲ ಕೈಚಳಕದಿಂದ ನೆರೆದವರನ್ನು ಮಂತ್ರಮುಗ್ದಗೊಳಿಸಿದರು. ಡುಪಿಗೆ ಆಗಮಿಸಿದ ಜಾಕೀರ್ ಹುಸೈನ್ ಕೃಷ್ಣನ ದರ್ಶನ ಮಾಡಿದ ಬಳಿಕ ಪೇಜಾವರ ಶ್ರೀಗಳ ಜೊತೆ ಮಾತುಕತೆ ನಡೆಸಿ ಆಶೀರ್ವಾದಪಡೆದರು. ಬಳಿಕ ಕೃಷ್ಣಮಠದ ತಾತ್ಕಾಲಿಕ ಪಾರ್ಕಿಂಗ್ ಪ್ರದೇಶದಲ್ಲಿ ಇರುವ ರಾಜಾಂಗಣ ವೇದಿಕೆಯಲ್ಲಿ ನಾದ ಲಯಾಮೃತ ಕಾರ್ಯಕ್ರಮ ನಡೆಸಿ ನೆರೆದವರನ್ನು ರಂಜಿಸಿದರು. ಕಿಕ್ಕಿರಿದ ಜನಸಂದಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿಟೀಲಿನಲ್ಲಿ ಕುಮರೇಶ್ ಹಾಗೂ ಜಯಂತಿ ಕುಮರೇಶ್ ಅವರು ವೀಣೆಯಲ್ಲಿ ಜಾಕೀರ್ ಅವರಿಗೆ ಸಾಥ್ ನೀಡಿದರು. ಇವರ ಜುಗಲ್ ಬಂದಿ ಕಾರ್ಯಕ್ರಮ ನೆರೆದ ಕಲಾರಸಿಕರು ರಸದೌತಣ ಅನುಭವಿಸಿದರು. ಜಾಕೀರ್ ಹುಸೇನ್ ರಾಗಂ, ತಾನಂ ಪಲ್ಲವಿ ಬಳಿಕ ಜ್ ತನಿಯಾವರ್ತನೆಯಲ್ಲಿ ಪ್ರೌಡಿಮೆಯನ್ನು ಮೆರೆದರು.

ರಿಪೋರ್ಟರ್: ಪಲ್ಲವಿ ಸಂತೋಷ್ ಸರಳೇಬೆಟ್ಟು

Related posts

Leave a Reply