Header Ads
Header Ads
Breaking News

ತಲಪಾಡಿಯಲ್ಲಿರುವ ಶಾರದಾ ಆಯುರ್ವೇದ ಆಸ್ಪತ್ರೆಯಲ್ಲಿ ವಿಶ್ವ ಯೋಗ ದಿನಾಚರಣೆ

ತಲಪಾಡಿಯ ಶಾರದಾ ಆಯುರ್ವೇದ ಆಸ್ಪತ್ರೆಯ ವತಿಯಿಂದ ವಿಶ್ವ ಯೋಗ ದಿನಾಚರಣೆ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು. ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಮುಂದಿನ 15 ದಿನಗಳ ಕಾಲ ರೋಗಕ್ಕೆ ಅನುಸಾರವಾಗಿ ಯೋಗ ಶಿಬಿರ ನಡೆಯಲಿದೆ.

ತುಳುನಾಡ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷ ಪೋ| ಎಂ.ಬಿ. ಪುರಾಣಿಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಾಚೀನ ಭಾರತದಿಂದ ರುಷಿ ಮುನಿಗಳು, ತಪಸ್ವಿಗಳು ಮಾಡಿದ ಸಾಧನೆಯನ್ನು ಪತಂಜಲಿ ಮಹಾರ್ಷಿ ಯೋಗ ವಿಜ್ಞಾನದ ರೂಪದಲ್ಲಿ ಜನಮಾನಸಕ್ಕೆ ತಲುಪಿಸುವ ಕಾರ್ಯ ಮಾಡಿದ್ದು ಇಂದು ಯೋಗ ವಿದ್ಯೆಯ ಮೂಲಕ ಜಗತಿನಾದ್ಯಂತ ಭಾರತದ ಆಧ್ಯಾತ್ಮಿಕ ಶಕ್ತಿ ಪ್ರದರ್ಶನಗೊಳ್ಳುತ್ತಿದ್ದು, ಇದರ ಉಪಯೋಗ ಪ್ರತಿಯೊಬ್ಬರು ಪಡೆಯುವಂತಾಗಬೇಕು ಎಂದರು.

ಶಾರದಾ ಆಯುರ್ವೇದ ಆಸ್ಪತ್ರೆಯ ಮುಖ್ಯ ಅಧೀಕ್ಷಕ ಡಾ|ರವಿ ಗಣೇಶ್ ಮೊಗ್ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಯೋಗ ದಿನಾಚರಣೆ ಒಂದು ದಿನಕ್ಕೆ ಸಿಇಮಿತವಾಗದೆ ಮುಂದಿನ 15 ದಿನಗಳ ಕಾಲ ಈ ಯೋಗ ಶಿಬಿರ ನಡೆಯಲಿದ್ದು ಇದರ ಸದುಪಯೋಗ ಎಲ್ಲರೂ ಪಡೆಯುವಂತಾಗಬೇಕು. ಯೋಗದಿಂದ ಮನಸ್ಸನ್ನು ಸ್ಥೀಮಿತದಲ್ಲಿರಿಸುವ ಶಕ್ತಿ ಯೋಗಕ್ಕಿದೆ. ಯೋಗ ಅಭ್ಯಾಸದಿಂದ ನಮ್ಮಲ್ಲಿರುವ ಕಾಮ ಕ್ರೋಧದಂತಹ ವಿಚಾರಗಳನ್ನು ಹತೋಟಿಗೆ ತರಲು ಸಾಧ್ಯವಿದ್ದು ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಿದೆ ಎಂದರು. (ಬೈಟ್)
ಆಸ್ಪತ್ರೆಯ ಸ್ವಸ್ಥ ವೃತ್ತ ಮತ್ತು ಯೋಗ ವಿಭಾಗದ ಮುಖ್ಯಸ್ಥೆ ಡಾ| ಸೌಮ್ಯಾ ಕೊಟ್ಯಾನ್, ಪ್ರಕೃತಿ ಚಿಕಿತ್ಸಾ ಸಒತ್ರೆಯ ಡಾ| ವಿದ್ಯಾ ಶೆಟ್ಟಿ ಮತ್ತು ಡಾ| ಸುಷ್ಮಿತಾ ಲಯಬದ್ಧ ಯೋಗದ ಪ್ರಾತ್ಯಾಕ್ಷತೆ ನೀಡಿದರು. ಶಾರದಾ ವಿದ್ಯಾನಿಕೇತನ ವಿದ್ಯಾರ್ಥಿಗಳು ಯೋಗ ಪ್ರಾತ್ಯಾಕ್ಷಿತೆ ನಡೆಸಿಕೊಟ್ಟರು.

ತಲಪಾಡಿ ಶಾರದಾ ವಿದ್ಯಾನಿಕೇತನದ ಆಡಳಿತ ಅಧಿಕಾರಿ ವಿವೇಕ್ ತಂತ್ರಿ,ಶಾಲಕ್ಯಾ ತಂತ್ರ ವಿಭಾಗದ ಡಾ| ವಿದ್ಯಾಲಕ್ಷ್ಮಿ . ತಲಪಾಡಿ ಶಾರದಾ ಆಯುರ್ಧಾಮದ ಯೋಜನಾ ಅ„ಕಾರಿ ವಿಕ್ರಂ ಕುಂಟಾರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *