Header Ads
Header Ads
Breaking News

ತಲಪಾಡಿಯಲ್ಲಿ ಸುಸಜ್ಜಿತ ಬಸ್ಸು ತಂಗುದಾಣವಿಲ್ಲದೆ ಪರದಾಡುತ್ತಿರುವ ಪ್ರಯಾಣಿಕರು

ಕರ್ನಾಟಕ ಕೇರಳ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಸುಸಜ್ಜಿತವಾದ ಒಂದು ಬಸ್ ನಿಲ್ದಾಣವಿಲ್ಲದೆ ಜನತೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಬಸ್ ನಿಲ್ದಾಣದೊಂದಿಗೆ ಮೂಲಭೂತ ಸೌಕರ್ಯಗಳನ್ನೂ ಒದಗಿಸಿಕೊಡೋದಾಗಿ ಹೇಳಿದ್ದ ಜನಪ್ರತಿನಿಧಿಗಳು ಈ ಬಗ್ಗೆ ಇನ್ನೂ ಗಮನಹರಸಿಲ್ಲ ಅನ್ನೋದು ಸಾರ್ವಜನಿಕರ ಆಗ್ರಹ. ಮದ್ಯ ವ್ಯಸನಿಗಳ ಹಾಗೂ ಜೂಜು ಮಾಫಿಯಾದ ಅಡ್ಡೆಯಾಗಿರುವ ಬಸ್ ನಿಲ್ದಾಣ ಈಗ ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿದೆ.

ಸುಮಾರು ವರ್ಷಗಳ ಹಿಂದೆ ಮಂಜೇಶ್ವರ ಗ್ರಾ. ಪಂ. ವತಿಯಿಂದ ತಲಪಾಡಿ ಪ್ರದೇಶದಲ್ಲಿ ಒಂದು ಬಸ್ಸು ನಿಲ್ದಾಣ ನಿರ್ಮಾಣವಾಗಿದೆ. ಆದರೆ ಅದು ಇದೀಗ ಮದ್ಯ ವ್ಯಸನಿಗಳ ಹಾಗೂ ಜೂಜು ಮಾಫಿಯಾ ಅಡ್ದೆಯಾಗಿದೆ. ಮಾತ್ರವಲ್ಲದೆ ರಾಷ್ಟ್ರೀಯ ಹೆದ್ದಾರಿಗೂ ಈ ಬಸ್ ನಿಲ್ದಾಣಕ್ಕೂ ಸಂಬಂಧವೇ ಇಲ್ಲದ ರೀತಿಯಲ್ಲಿ ಈ ಬಸ್‌ನಿಲ್ದಾಣವಿದೆ. ಪ್ರಯಾಣಿಕರು ಇದೀಗ ರಾಷ್ಟ್ರೀಯ ಹೆದ್ದಾರಿಯಲ್ಲೇ ಮಳೆ ಬಿಸಿಲನ್ನು ಸಹಿಸಿಕೊಂಡೇ ಬಸ್ಸಿಗಾಗಿ ಕಾಯಬೇಕಾಗುತ್ತದೆ. ಮಾತ್ರವಲ್ಲದೆ ಕೇರಳದ ಖಾಸಗಿ ಬಸ್ಸುಗಳಿಗೆ ಇಲ್ಲಿ ನಿಲುಗಡೆಯಾಗಲು ಕೂಡಾ ಸ್ಥಳವಕಾಶದ ಕೊರತೆಯಿರುವುದಾಗಿ ಚಾಲಕರು ಹೇಳುತಿದ್ದಾರೆ.

ಕೇರಳ ಕರ್ನಾಟಕ ಗಡಿ ಪ್ರದೇಶದ ಪ್ರಮುಖ ಪ್ರದೇಶವಾಗಿರುವ ತಲಪಾಡಿಯಲ್ಲಿರುವ ಖಾಲಿ ಬಿದ್ದಿರುವ ಸರಕಾರದ ಸುಮಾರು 75 ಸೆಂಟ್ಸ್ ಸ್ಥಳದಲ್ಲಿ ಸುಸಜ್ಜಿತವಾದ ಬಸ್ಸು ನಿಲ್ದಾಣವನ್ನು ಸ್ಥಾಪಿಸುವಂತೆ ಸಿಪಿಎಂ ಹಿರಿಯ ನೇತಾರ ಹಾಗೂ ಮಂಜೇಶ್ವರ ಬ್ಲೋಕ್ ಪಂ. ಸದಸ್ಯ ಕೆ ಆರ್ ಜಯಾನಂದರವರು ಜಿಲಾಧಿಕಾರಿಯವರಿಗೆ ಮನವಿಯ ಮೂಲಕ ವಿನಂತಿಸಿಕೊಂಡಿದ್ದಾರೆ. ಜೊತೆಯಾಗಿ ಈ ಪ್ರದೇಶದ ಜನತೆ ಹಾಗೂ ಇಲ್ಲಿಗೆ ಆಗಮಿಸುತ್ತಿರುವ ಪ್ರಯಾಣಿಕರು ಎದುರಿಸುವಂತಹ ಸಮಸ್ಯೆಗಳ ಚಿತ್ರಣವನ್ನು ಉಲ್ಲೇಖಿಸಿ ಸಮಗ್ರವಾದ ವರದಿಯನ್ನು ಸಮರ್ಪಿಸಿರುವುದಾಗಿ ಅವರು ತಿಳಿಸಿರುತ್ತಾರೆ.

ಇತ್ತೀಚಿಗೆ ಆರಂಭಗೊಂಡ ಮಳೆಯ ಬಳಿಕ ಇಲ್ಲಿ ಪ್ರಯಾಣಿಕರು ಒದ್ದೆಯಾಗಿಕೊಂಡೇ ಬಸ್ಸಿಗಾಗಿ ಕಾಯುತ್ತಿರುವ ದ್ರಶ್ಯ ಕಂಡು ಬರುತ್ತಿರುವುದಾಗಿ ಮನವಿಯಲ್ಲಿ ಮನವರಿಕೆ ಮಾಡಿದ್ದಾರೆ. ಜೊತೆಯಾಗಿ ಇಲ್ಲಿಗೆ ಆಗಮಿಸುತ್ತಿರುವ ಪ್ರಯಾಣಿಕರಿಗೆ ಪ್ರಾಥಮಿಕ ಸೌಕರ್ಯಗಳಿಲ್ಲ. ಎಲ್ಲಾ ಆವಶ್ಯಕತೆಗಳಿಗೂ ರಸ್ತೆ ಬದಿಯನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಮಾತ್ರವಲ್ಲದೆ ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಬಸ್ಸು ನಿಲ್ದಾಣದಲ್ಲಿ ರಾತ್ರಿ ವೇಳೆ ಕುಡುಕರ ಹಾಗೂ ಗಾಂಜಾ ವ್ಯಸನಿಗಳ ಉಪಟಲದಿಂದ ಬಸ್ಸು ಕಾಯುತ್ತಿರುವ ಪ್ರಯಾಣಿಕರು ಜೀವ ಭಯವನ್ನು ಎದುರಿಸುವಂತಹ ಪರಿಸ್ಥಿತಿಯೂ ಇಲ್ಲಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ತಲಪಾಡಿಯಲ್ಲಿ ಎಲ್ಲಾ ಸೌಕರ್ಯಗಳಿರುವ ಸುಸಜ್ಜಿತ ಬಸ್ಸು ನಿಲ್ದಾಣ ನಿರ್ಮಿಸುವಂತೆ ಜಯಾನಂದರವರು ಸಾರ್ವಜನಿಕರಿಗಾಗಿ ಮನವಿಯಲ್ಲಿ ವಿನಂತಿಸಿಕೊಂಡಿದ್ದಾರೆ.

Related posts

Leave a Reply

Your email address will not be published. Required fields are marked *