Header Ads
Header Ads
Breaking News

ತಲಪಾಡಿಯ ದೇವಿಪುರವನ್ನು ಸಂಪರ್ಕಿಸುವ ರಸ್ತೆ ಅಸ್ತವ್ಯಸ್ಥ : ಸಾರ್ವಜನಿಕರು ಆಕ್ರೋಶ

ಮಂಜೇಶ್ವರ ಗ್ರಾಮ ಪಂಚಾಯತ್‌ನ ತೂಮಿನಾಡು ಹಿಲ್‌ಟಾಪ್ ನಗರದಿಂದ ಗಡಿ ಪ್ರದೇಶವಾದ ಕರ್ನಾಟಕ ತಲಪಾಡಿಯ ದೇವಿಪುರವನ್ನು ಸಂಪರ್ಕಿಸುವ ರಸ್ತೆಯೊಂದು ಸಂಪೂರ್ಣವಾಗಿ ಹದೆಗೆಟ್ಟು ಹೋಗಿದೆ. ಸಂಚಾರಕ್ಕೆ ಅಯೋಗ್ಯವಾಗಿ ವರ್ಷಗಳೇ ಕಳೆದರೂ ಅಧಿಕಾರಿಗಳು ಕೇವಲ ಮಾತುಗಳಿಂದ ಗ್ರಾಮಸ್ಥರನ್ನು ವಂಚಿಸುತ್ತಿದ್ದಾರೆ. ಜನಪ್ರತಿನಿಧಿಗಳು ಇನ್ನು ಗಾಢ ನಿದ್ರೆಯಿಂದ ಎಚ್ಛೆತ್ತುಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 ಸಾರ್ವಜನಿಕರು ಸುಗಮ ಸಂಚಾರಕ್ಕೆ ಇಲ್ಲಿ ನರಕ ಯಾತನೆಯನ್ನು ಅನುಭವಿಸುತ್ತಿದ್ದಾರೆ. ಸುಮಾರು ಒಂದೂವರೆ ಕಿಲೋ ಮೀಟರಿನಷ್ಟು ರಸ್ತೆ ಸಂಪೂರ್ಣವಾಗಿ ಹದೆಗೆಟ್ಟಿದೆ. ಇತ್ತೀಚೆಗೆ ಇದೆ ರಸ್ತೆಯ ಪಕ್ಕದಲ್ಲಿ ಮಂಜೇಶ್ವರ ಗ್ರಾ.ಪಂ. ಫಂಡ್‌ನಿಂದ ಲಕ್ಷಾಂತರ ರೂ. ವ್ಯಯಿಸಿ ಚರಂಡಿಯನ್ನು ನಿರ್ಮಿಸಲಾಗಿತ್ತು. ಆದರೆ ಇದರ ಕಾಮಗಾರಿ ವೇಳೆ ಅಲ್ಪವಾದರೂ ಉತ್ತಮ ಸ್ಥಿತಿಯಲ್ಲಿದ್ದ ರಸ್ತೆಯನ್ನು ಚರಂಡಿ ನಿರ್ಮಾಣದ ಗುತ್ತಿಗೆದಾರ ಸಂಪೂರ್ಣವಾಗಿ ಹದೆಗೆಡಿಸಿರುವುದಾಗಿ ಊರವರು ಹೇಳುತ್ತಿದ್ದಾರೆ. ಇದನ್ನು ಪ್ರಶ್ನಿಸಿದಾಗ ಕಾಮಗಾರಿ ಮುಗಿದ ಬಳಿಕ ರಸ್ತೆಯನ್ನು ಸರಿಮಾಡಿ ಕೊಡಲಾಗುವುದೆಂದು ಹೇಳಿದ ಗುತ್ತಿಗೆದಾರ ನಾಪತ್ತೆಯಾಗಿರುವುದಾಗಿ ಹೇಳಲಾಗಿದೆ . ಇದೀಗ ಈ ರಸ್ತೆಯಲ್ಲಿ ಧೂಳುಗಳು ಬರುತ್ತಿರುವ ಹಿನ್ನೆಯಲ್ಲಿ ರಸ್ತೆ ಬದಿಗಳಲ್ಲಿ ವಾಸಿಸುತ್ತಿರುವ ಮನೆ ಮಂಡಿಗಳಿಗೆ ಅನಾರೋಗ್ಯ ಎದುರಾಗಿರುವುದಾಗಿ ಹೇಳಲಾಗಿದೆ.

ದಿನನಿತ್ಯ ನೂರಾರು ಮಂದಿ ವಾಹನಗಳಲ್ಲೂ ಕಾಲ್ನಡೆಯಾಗಿಯೂ ಸಂಚರಿಸುತ್ತಿರುವ ಈ ರಸ್ತೆ ಇನ್ನು ಒಂದು ಸರಿಯಾದ ಮಳೆ ಬಂದರೆ ಈಜು ಕೊಳವಾಗುವುದರಲ್ಲಿ ಎರಡು ಮಾತಿರಲಾರದು . ರಸ್ತೆ ಮೇಲಿನಿಂದ ಹರಿದು ಹೋಗಲು ಲಕ್ಷಾಂತರ ರೂ ಖರ್ಚು ಮಾಡಿ ನಿರ್ಮಿಸಿದ ಚರಂಡಿ ಕೂಡಾ ಉಪಯೋಗ ಶೂನ್ಯವಾಗಬಹುದಾಗಿ ಊರವರು ಹೇಳುತ್ತಿದ್ದಾರೆ. ಇದೀಗ ಅಂತಿಮಗೊಂಡಿರುವ ಚರಂಡಿಯ ಕೊನೆ ಭಾಗದಿಂದ ಚರಂಡಿಗೆ ನೀರು ಹರಿದು ಬರಲು ವ್ಯವಸ್ಥೆ ಇಲ್ಲದಂತಾಗಿದೆ. ಇದೆ ಚರಂಡಿಯನ್ನು ಅಲ್ಪ ಉದ್ಧವನ್ನಾಗಿ ಮಾಡಿದ್ದರೆ ಚರಂಡಿಯಲ್ಲಿ ನೀರು ಹರಿದು ಹೋಗಬಹುದಿತ್ತು. ಆದರೆ ಮಳೆಗಾಲದಲ್ಲಿ ಈ ಸಲವೂ ಮಳೆ ನೀರು ರಸ್ತೆಯಲ್ಲೇ ಹರಿದು ಹೋಗಬಹುದಾಗಿ ಊರವರು ಹೇಳುತ್ತಿದ್ದಾರೆ. ಇದನ್ನು ಊರವರು ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರತಿಕ್ರಿಯೆ ಇಲ್ಲವೆನ್ನಲಾಗಿದೆ . ಇದೆ ರಸ್ತೆಗೆ ಜಿಲ್ಲಾ ಪಂಚಾಯತ್ ವತಿಯಿಂದ ಹರ್ಷದ್ ವರ್ಕಾಡಿ ಹತ್ತು ಲಕ್ಷ ರೂ. ಮೀಸಲಿರಿಸಿರುವುದಾಗಿ ಹೇಳುತ್ತಿದ್ದರೂ ಈ ತನಕ ಇಲ್ಲಿಗೆ ಫಂಡ್ ತಲುಪಿಲ್ಲವೆನ್ನಲಾಗಿದೆ.

Related posts

Leave a Reply

Your email address will not be published. Required fields are marked *