Header Ads
Header Ads
Breaking News

ತಲಪಾಡಿಯ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ : ಗುತ್ತಿಗೆದಾರನ ವಿರುದ್ಧ ನಾಗರಿಕರ ವ್ಯಾಪಕ ಆಕ್ರೋಶ

ಮಂಜೇಶ್ವರ: ನಾಗರಿಕರ ವ್ಯಾಪಕವಾದ ಪ್ರತಿಭಟನೆಯ ಬಳಿಕ ಕೊನೆಗೂ ಎಚ್ಛೆತ್ತುಕೊಂಡ ಸರಕಾರ ಕಾಸರಗೋಡು ತಲಪಾಡಿ ರಾಷ್ಟ್ರೀಯ ಹೆದ್ದಾರಿ ದುರಸ್ಥಿಗೆ ಕೋಟಿ ರೂಪಾಯಿಗಳನ್ನೂ ಬಿಡುಗಡೆಗೊಳಿಸಿದೆ. ಆದರೆ ಇದನ್ನು ಕರಾರು ಪಡಕೊಂಡ ಗುತ್ತಿಗೆದಾರ ಇದೀಗ ತನ್ನ ಕಳಪೆ ಕಾಮಗಾರಿಯನ್ನು ಮುಂದುವರಿಸಿದ್ದು, ದುರಸ್ಥಿಯಾದ ರಸ್ತೆ ನಾಲ್ಕು ದಿನ ಕಳೆದು ಸುರಿದ ಮಳೆಯಲ್ಲಿ ರಸ್ತೆಗೆ ಹಾಕಿದ ಡಾಮರು ಸಂಪೂರ್ಣವಾಗಿ ಕಿತ್ತುಹೋಗಿದ್ದು ಮತ್ತೆ ಗುಂಡಿಗಳು ಪ್ರತ್ಯಕ್ಷವಾಗಿದೆ.

ಮಂಜೇಶ್ವರದ ಪೊಸೋಟು, ಗೋವಿಂದ ಪೈ ರಸ್ತೆ ಸೇರಿದಂತೆ ಹಲವಾರು ಭಾಗಗಳಲ್ಲಿ ಬೃಹತ್ತಾದ ಗುಂಡಿಗಳು ಮತ್ತೆ ಪ್ರತ್ಯಕ್ಷಗೊಂಡಿದೆ. ಗುತ್ತಿಗೆದಾರನ ಕಳಪೆ ಕಾಮಗಾರಿ ವಿರುದ್ಧ ನಾಗರಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಹತ್ತು ನಿಮಿಷದ ಮಳೆಗೆ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ.
ಕಾಮಗಾರಿಯ ಆರಂಭದಲ್ಲಿ ತಲಪಾಡಿಯಿಂದ ಕಾಮಗಾರಿ ಆರಂಭಿಸುವ ಸಂದರ್ಭ ಕಳಪೆ ಕಾಮಗಾರಿಯನ್ನು ಪ್ರದರ್ಶಿಸಿದಾಗ ಊರವರು ಕಾಮಗಾರಿಗೆ ತಡೆಯೊಡ್ಡಿದ್ದರು. ಆ ಸಂದರ್ಭ ಅಲ್ಲಿಂದ ಪರಾರಿಯಾದ ಗುತ್ತಿಗೆದಾರ ಪೊಸೊಟ್ಟಿನಿಂದ ಕಾಮಗಾರಿಯನ್ನು ಆರಂಭಿಸಿದ್ದ. ಇದೀಗ ಅಲ್ಲೂ ಗುತ್ತಿಗೆದಾರನ ಕಳಪೆಕಾಮಗಾರಿ ಎದ್ದು ತೋರುತ್ತಿದೆ.

ಈ ಬಗ್ಗೆ ಧ್ವನಿ ಎತ್ತಿ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಲೋಕೋಪಯೋಗಿ ಇಲಾಖೆ ಕೂಡಾ ಮೌನವನ್ನು ಪಾಲಿಸುತ್ತಿರುವುದು ಹಲವಾರು ಸಂಶಯಗಳಿಗೆ ಕಾರಣವಾಗಿದೆ. ಕೂಡಲೇ ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ. ಕಳಪೆ ಕಾಮಗಾರಿಯನ್ನು ನಡೆಸಿ ಕೋಟಿ ರೂಪಾಯಿಗಳನ್ನು ಜೇಬಿಗೆ ಹಾಕಲು ಹವಣಿಸುತ್ತಿರುವ ಗುತ್ತಿಗೆದಾರನ ವಿರುದ್ಧ ಕ್ರಮ ಜರಗಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.

 

Related posts

Leave a Reply

Your email address will not be published. Required fields are marked *