Header Ads
Header Ads
Breaking News

ತಲ್ಲೂರು ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಗೆ ಮುಕ್ತಿ : ಇದು ವಿ4 ನ್ಯೂಸ್ ವಾಹಿನಿಯ ಫಲಶ್ರುತಿ

ಕುಂದಾಪುರ: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಭಾರೀ ಮಳೆಗೆ ತಲ್ಲೂರು ಪೇಟೆಯ ಅನತಿ ದೂರದಲ್ಲಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ಹೆದ್ದಾರಿಯಲ್ಲೇ ನಿಂತಿದ್ದ ಮಳೆ ನೀರಿಗೆ ಶುಕ್ರವಾರ ಸಂಜೆ ಹೆದ್ದಾರಿ ಗುತ್ತಿಗೆ ಕಂಪೆನಿ ಮುಕ್ತಿ ನೀಡಿದೆ.

ಹೆದ್ದಾರಿಯಲ್ಲಿ ನಿಂತ ನೀರಿನಿಂದಾಗಿ ವಾಹನ ಸವಾರರಿಗಾಗುತ್ತಿರುವ ಸಮಸ್ಯೆಗಳ ಬಗ್ಗೆ ವಿ4 ವಾಹಿನಿ ಸಮಗ್ರ ವರದಿ ಪ್ರಕಟಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡಿತ್ತು. ಇದೀಗ ಎಚ್ಚೆತ್ತುಕೊಂಡ ಗುತ್ತಿಗೆ ಕಂಪೆನಿ ಕಲ್ಕೆರೆ ಬಳಿಯ ಹೆದ್ದಾರಿಯಲ್ಲಿ ನಿಲ್ಲುವ ಮಳೆ ನೀರಿಗೆ ಶಾಶ್ವತ ಪರಿಹಾರಕ್ಕೆ ಮುಂದಾಗಿದೆ. ಇನ್ನೊಂದು ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು, ನೀರು ನಿಲ್ಲುವ ರಸ್ತೆಯನ್ನು ಅಗೆದು ಮೋರಿಯನ್ನು ಅಳವಡಿಸುವ ಕೆಲಸಕ್ಕೆ ಕೈಹಾಕಿದೆ.
ತಲ್ಲೂರಿನ ಕಲ್ಕೆರೆ ಪರಿಸರ ನಿವಾಸಿಗಳ ಸತತ ಪ್ರತಿಭಟನೆಗಳ ಬಳಿಕ ಎಚ್ಚೆತ್ತುಕೊಂಡ ಐಆರ್‍ಬಿ ಕಂಪೆನಿ ಮಳೆಗಾಲ ಆರಂಭಕ್ಕೂ ಮುನ್ನಾ ಈ ಭಾಗದಲ್ಲಿ ಚರಂಡಿ ನಿರ್ಮಾಣ ಕಾರ್ಯಕ್ಕೆ ಮುಂದಾಗಿತ್ತಿ. ಇದೀಗ ಮಳೆಗಾಲ ಆರಂಭವಾದರೂ ಕಾಮಗಾರಿ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ಮಳೆ ನೀರು ನಿಂತು ವಾಹನ ಸವಾರರ ಸುಗಮ ಸಂಚಾರಕ್ಕೆ ತೊಡಕುಂಟು ಮಾಡಿತು. ಅಲ್ಲದೇ ಒಂದೇ ದಿನದಲ್ಲಿ ನಾಲ್ಕು ಅಪಘಾತಗಳು ಸಂಭವಿಸಿದ್ದವು.

ಕಳೆದ ಕೆಲ ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ಹೆದ್ದಾರಿ ಕಾಮಗಾರಿಯು ಗುತ್ತಿಗೆ ಕಂಪೆನಿ ಅಲ್ಲಲ್ಲಿ ನಡೆಸಿದ ಅಪೂರ್ಣ ಕಾಮಗಾರಿಯಿಂದಾಗಿ ತಾಲೂಕಿನಾದ್ಯಂತ ಸುರಿದ ಭಾರೀ ಮಳೆ ಸವಾರರಿಗೆ ಕೆಲವೆಡೆ ಅಧ್ವಾನ ಸೃಷ್ಠಿಸಿತ್ತು. ಇದೀಗ ಸವಾರರಿಗಾಗುತ್ತಿರುವ ಸಮಸ್ಯೆಗಳನ್ನು ಅರಿತ ಐಆರ್‍ಬಿ ಗುತ್ತಿಗೆ ಕಂಪೆನಿ ಅಪಾಯ ಆಹ್ವಾನಿಸುವ ಕಡೆಗಳಲ್ಲೆಲ್ಲಾ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಲು ಮುಂದಾಗಿದೆ.

Related posts

Leave a Reply

Your email address will not be published. Required fields are marked *