Header Ads
Header Ads
Header Ads
Header Ads
Header Ads
Header Ads
Breaking News

ತಹಶೀಲ್ದಾರ್ ನೇತೃತ್ವದಲ್ಲಿ ನಿರ್ಮಾಣಗೊಂಡ ‘ಬೆಳಕು-2′ ಮನೆ ಹಸ್ತಾಂತರ ಮಾಡಿದ ಶಾಸಕ ಎಸ್. ಅಂಗಾರ

ಸ್ವಂತ ಮನೆ ಇಲ್ಲದೆ ಕಷ್ಟ ಎದುರಿಸುತ್ತಿದ್ದ ಅಜ್ಜಾವರದ ಅಡ್ಪಂಗಾಯ ಮಹಮ್ಮದ್ ಕುಂಞಯವರಿಗೆ ಸುಳ್ಯ ತಹಶೀಲ್ದಾರ್ ನೇತೃತ್ವದಲ್ಲಿ ದಾನಿಗಳ ನೆರವಿನೊಂದಿಗೆ ಮನೆ ನಿರ್ಮಿಸಿಕೊಡಲಾಗಿದ್ದು, ಈ ಮನೆಯ ಹಸ್ತಾಂತರ ಕಾರ್ಯಕ್ರಮವು ಶಾಸಕರ ಮೂಲಕ ನೆರವೇರಿತು.

ನೂತನವಾಗಿ ನಿರ್ಮಾಣಗೊಂಡ ‘ಬೆಳಕು-2’ ಮನೆಯನ್ನು ಸುಳ್ಯ ಶಾಸಕ ಎಸ್.ಅಂಗಾರ ಉದ್ಘಾಟಿಸಿ, ಮನೆ ಒಡೆಯನಿಗೆ ಹಸ್ತಾಂತರಿಸಿ ಮಾತನಾಡಿದ ಶಾಸಕರು, ಮನುಷ್ಯತ್ವ ಹೇಳುವಂತದ್ದಲ್ಲ. ಜಾರಿಗೊಳಿಸುವಂತದ್ದು. ಆದರೆ ಮನುಷ್ಯತ್ವ ಕಳೆದು ಹೋದ ಕಾರಣದಿಂದ ಪ್ರಕೃತಿ ವಿಕೋಪಗಳು ಎದುರಾಗುತ್ತಿವೆ. ಎಲ್ಲವನ್ನೂ ಇನ್ನೊಬ್ಬರು ಮಾಡಬೇಕೆಂದು ಕಾಯುವ ದಿನಗಳಲ್ಲಿ ದಾನಿಗಳ ನೆರವಿನೊಂದಿಗೆ ಬೆಳಕು ನೀಡುವ ಕಾರ್ಯ ಮಾಡಿರುವುದು ಮಾನವೀಯವಾದುದು. ಇಂತಹ ಗುಣ ಹೆಚ್ಚಲಿ ಎಂದು ಹೇಳಿದರು.

ಬೆಳಕು ಯೋಜನೆಯ ರೂವಾರಿ, ಸುಳ್ಯ ತಹಶೀಲ್ದಾರ್ ಕುಂಞ ಅಹ್ಮದ್ ಮಾತನಾಡಿ, ದ.ಕ. ಜಿಲ್ಲೆ ಮೊಳಹಳ್ಳಿ ಶಿವರಾಯರಂತಹ ಸಹಕಾರಿಗಳ ನೆಲೆ. ಹೀಗಾಗಿ ಇಲ್ಲಿ ಸಹಕಾರ ಗುಣಗಳು ಮೇಳೈಸಿವೆ. ಈ ಕಾರಣದಿಂದಲೇ ಇಂತಹ ಮಾನವೀಯ ಕಾರ್ಯಗಳು ಇಲ್ಲಿ ನಡೆದಿದೆ ಎಂದು ಹೇಳಿದರು.

ಅನೇಕ ನಿಯಮಗಳ ಕಾರಣದಿಂದ ಅರ್ಹ ಫಲಾನುಭವಿಗಳಿಗೆ ಸರಕಾರಿ ಯೋಜನೆಗಳ ವಸತಿಗಳು ಸಿಗಲು ಅವಕಾಶವಾಗುವುದಿಲ್ಲ. ಈ ಕಾರಣದಿಂದ ಇಂತಹ ಕಾರ್ಯಗಳನ್ನು ಮಾಡಲು ಮುಂದೆ ಬಂದಿದ್ದೇವೆ. ಇದು 2ನೇ ಮನೆಯಾಗಿದ್ದು, 3ನೇ ಮನೆ ಲಯನ್ಸ್ ಕ್ಲಬ್ ನೇತೃತ್ವದಲ್ಲಿ ಉಬರಡ್ಕದಲ್ಲಿ ನಿರ್ಮಾಣಗೊಳ್ಳಲಿದೆ. 4ನೇ ಮನೆ ಬೆಳ್ಳಾರೆಯಲ್ಲಿ ನಿರ್ಮಾಣಗೊಳ್ಳಲಿದೆ. ಸುಳ್ಯ ತಾಲೂಕನ್ನು ಗುಡಿಸಲು ಮುಕ್ತ ತಾಲೂಕಿನ ಗುರಿ ಹೊಂದಲಾಗಿದೆ ಎಂದು ತಹಶೀಲ್ದಾರ್ ಹೇಳಿದರು.

ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಅಜ್ಜಾವರ ಗ್ರಾ.ಪಂ. ಅಧ್ಯಕ್ಷೆ ಬೀನಾ ಕರುಣಾಕರ ಶುಭ ಹಾರೈಸಿದರು. ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ, ಎ.ಬಿ. ಅಶ್ರಫ್ ಸಅದಿ, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಬೆಳಕು ಮನೆಯ ದಾನಿಗಳಾದ ಗೋಪಾಲಕೃಷ್ಣ ಕರೋಡಿ, ಹಾಗೂ ಮತ್ತಿತರರು ಸಹಕರಿಸಿದ್ರು.

Related posts

Leave a Reply

Your email address will not be published. Required fields are marked *