Header Ads
Breaking News

ತಾಲೂಕು ಪಂಚಾಯತ್ ರದ್ದು ಪಡಿಸುವ ಸಚಿವರ ಹೇಳಿಕೆಗಳಿಂದ ಜನರನ್ನು ದಾರಿ ತಪ್ಪಿಸುವ ಕೆಲಸ : ಶಾಸಕ ಯು.ಟಿ.ಖಾದರ್ ಅಸಮಾಧಾನ

ತಾ.ಪಂ ರದ್ದು ಪಡಿಸಲು ಹೊರಟಿರುವ ಸರ್ಕಾರ ಹಾಗೂ ಸಚಿವರ ಇಂತಹ ಗೊಂದಲದ ಹೇಳಿಕೆಗಳಿಂದ ಜನರನ್ನು ದಾರಿ ತಪ್ಪಿಸುವ ಕೆಲಸ ಕೈಬಿಡಬೇಕೆಂದು ಶಾಸಕ ಯು.ಟಿ.ಖಾದರ್ ಒತ್ತಾಯಿಸಿದ್ರು. ಈ ಕುರಿತು ಮಂಗಳೂರಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವ ಕಾರಣದಿಂದ ರದ್ದು ಮಾಡ್ತಾ ಇದ್ದೀರಿ ಎಂಬುದನ್ನು ಜನರಿಗೆ ತಿಳಿಸಿ. 73ನೇ ತಿದ್ದುಪಡಿಯಂತೆ ಮೂರು ಹಂತಗಳಲ್ಲಿ ಅಧಿಕಾರ ವಿಕೇಂದ್ರೀಕರಣ ಆಗಬೇಕು ಎಂಬುದು ಸಂವಿಧಾನದ ಆಶಯವಾಗಿದೆ. ತಾಪಂ ರದ್ದು ಪಡಿಸಿ ಎಲ್ಲ ಕೆಲಸವನ್ನು ಶಾಸಕರೇ ಮಾಡಬೇಕೆ?. ಇದರಿಂದಾಗಿ ಅಭಿವೃದ್ಧಿಗೆ ಹಿನ್ನಡೆ ಆಗುತ್ತದೆ. ಕೂಡಲೇ ಇಂತಹ ಯೋಚನೆ ಕೈಬಿಡಬೇಕು ಎಂದು ಖಾದರ್ ಒತ್ತಾಯ ಮಾಡಿದರು.

ಇನ್ನು ಮೀನುಗಾರಿಕಾ ಬೋಟ್‍ಗೆ ನೀಡುವ ಸೀಮೆ ಎಣ್ಣೆ ಕಡಿತವಾಗಿದೆ. ಸರ್ಕಾರ ಸಣ್ಣ ಮೀನುಗಾರರಿಗೆ ಅನ್ಯಾಯ ಮಾಡುತ್ತಿದೆ. ಸಿದ್ಧರಾಮಯ್ಯ ಸರ್ಕಾರ 400 ಲೀಟರ್ ಸೀಮೆ ಎಣ್ಣೆ ಕೊಡುತ್ತಿತ್ತು, ಈಗ ಅದನ್ನ ಬಿಜೆಪಿ ಸರ್ಕಾರ 130 ಲೀಟರ್‍ಗೆ ಇಳಿಕೆ ಮಾಡಿದೆ. ನಮ್ಮದು ಮೀನುಗಾರರ ಸರ್ಕಾರ ಅಂತಾ ಪೋಸ್ ಕೊಡುತ್ತಾರೆ. ಅದ್ರೆ ಮೀನುಗಾರಿಕಾ ಯೋಜನೆಗೆ ಕತ್ತರಿ ಹಾಕಿದೆ ಎಂದು ಕಿಡಿಕಾರಿದರು.

Related posts

Leave a Reply

Your email address will not be published. Required fields are marked *