Header Ads
Header Ads
Header Ads
Breaking News

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಶಿರಾಲಿಯ ಚಿತ್ರಾಪುರದ ಶಾಲೆಯಲ್ಲಿ ಕಲೋತ್ಸವ

ಶ್ರೀವಲಿ ಪ್ರೌಢಶಾಲೆ ಚಿತ್ರಾಪುರ ಹಾಗು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರಾಪುರ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಶಿರಾಲಿಯ ಚಿತ್ರಾಪುರದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರದಂದು ನಡೆಯಿತು.
ಕಾರ್ಯಕ್ರಮವನ್ನು ಶಾಸಕ ಮಂಕಾಳ ವೈದ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಅವರ ಮುಂದಿನ ಭವಿಷ್ಯಕ್ಕೆ ತಯಾರು ಮಾಡುವ ಕಾರ್ಯ ಶಾಲಾ ಶಿಕ್ಷಕರಿಂದ ಶಾಲೆಯಿಂದ ಆಗುತ್ತಿದೆ ಈ ಕಾರ್ಯ ಮೆಚ್ಚುವಂತಹದ್ದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿರಾಲಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ, ಈ ಹಿಂದೆಲ್ಲ ಶಿಕ್ಷಣ ಎಂದರೆ ಕಬ್ಬಿಣದ ಕಡಲೆಯಂತಿತ್ತು. ಮಕ್ಕಳಿಗೆ ಪಾಠ ಎಂದರೆ ತೀರಾ ಕಷ್ಟದಾಯಕವಾಗಿದ್ದಂತಹ ಸಂಧರ್ಭವಾಗಿತ್ತು. ಆದರೆ ಈಗಿನ ಶಿಕ್ಷಣದಲ್ಲಿ ಸಾಕಷ್ಟು ಬದಲಾಗಿದ್ದು, ಮಕ್ಕಳಿಗೆ ಪಾಠವೂ ಆಟದ ಜೊತೆಗೆ ಅಥೈಸುವಂತಹ ಕಾರ್ಯವಾಗುತ್ತಿದೆ ಎಂದರು.
ವೇದಿಕೆಯಲ್ಲಿ ತಾಲೂಕಾ ಪಂಚಾಯತ್ ಉಪಾಧ್ಯಕ್ಷ ರಾಧಾ ಅಶೋಕ ವೈದ್ಯ, ತಾಲೂಕಾ ಪಂಚಾಯತ್ ಸದಸ್ಯೆ ಮಾಲತಿ ದೇವಾಡಿಗ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ವಿಷ್ಣು ದೇವಾಡಿಗ, ಶಿರಾಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುನೀತಾ ಹೇರೂರಕರ್ ಉಪಸ್ಥಿತರಿದ್ದರು.
ವರದಿ: ರಾಘವೇಂದ್ರ ಮಲ್ಯ ಭಟ್ಕಳ

Related posts

Leave a Reply