
ನಗರದ ಪ್ರತಿಷ್ಠಿತ ಮಾಲ್ವೊಂದರಲ್ಲಿ ಕಾರ್ಯಾಚರಿಸುವ ‘ಚಿಕ್ಕಿಂಗ್ ಇಟ್ಸ್ ಮೈ ಚಾಯಿಸ್’ ಸಂಸ್ಥೆಯಿಂದ ಆಹಾರ ಖಾದ್ಯ ಪಾರ್ಸೆಲ್ ಪಡೆದ ಮಹಿಳೆಯೊಬ್ಬರು ಆಘಾತಕ್ಕೊಳಗಾಗಿದ್ದಾರೆ. ಪಾರ್ಸೆಲ್ ತರಿಸಿದ ಆಹಾರದಲ್ಲಿ ಜೀವಂತ ಹುಳು ಹರಿದಾಡಿದೆ ಎಂದು ಆರೋಪಿಸಿ ಸಂತ್ರಸ್ತೆಯು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.ಲೇಡಿಹಿಲ್ನ ಸಲ್ಮಾ ಸಿಮ್ರನ್ ಕೆ. ಎಂಬವರು ‘ಚಿಕ್ಕಿಂಗ್’ ಸಂಸ್ಥೆಯಿಂದ ಚಿಕನ್ ಖಾದ್ಯ ಸಹಿತ ಬರ್ಗರ್ ಪಾರ್ಸೆಲ್ಗೆ ಆರ್ಡರ್ ಮಾಡಿದ್ದರು. ಬಳಿಕ ರಾತ್ರಿ 8 ಗಂಟೆ ಸುಮಾರಿಗೆ ಪಾರ್ಸೆಲ್ ಮನೆ ಬಾಗಿಲಿಗೆ ಬಂದಿದೆ. ನಂತರ ಸಂತ್ರಸ್ತೆ ಸಹಿತ ತಾಯಿ, ಮೊಮ್ಮಕ್ಕಳು ಅದೇ ಆಹಾರವನ್ನು ಅಲ್ಪ ಪ್ರಮಾಣದಲ್ಲಿ ಸೇವಿಸಿದ್ದಾರೆ. ಈ ನಡುವೆ ಚಿಕನ್ ಖಾದ್ಯದಲ್ಲಿ ದಿಢೀರ್ ಹುಳು ಕಾಣಿಸಿಕೊಂಡಿದ್ದು, ಕುಟುಂಬವೇ ಆತಂಕ್ಕೀಡಾಗಿದೆ. ಈ ಬಗ್ಗೆ ಸಂತ್ರಸ್ತೆಯು ಊರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.