Header Ads
Header Ads
Breaking News

ಮಂಗಳೂರು ವಿವಿ ಪದವಿ ತುಳುಪಠ್ಯ ’ಸಿರಿದೊಂಪ’ ಬಿಡುಗಡೆ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಮಂಗಳೂರು ವಿಶ್ವವಿದ್ಯಾಲಯ ವತಿಯಿಂದ ನಗರದ ತುಳುಭವನದಲ್ಲಿ ಪದವಿ ತುಳು ಪಠ್ಯ ಸಿರಿದೊಂಪ, ತುಡರ್ ಒಂಜಿ ಇದರ ಬಿಡುಗಡೆ ಸಮಾರಂಭ ನಡೆಯಿತು.ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ ಪಿ.ಎಸ್. ಯಡಪಡಿತ್ತಾಯ ಅವರು ಪುಸ್ತಕ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಪದವಿಗೆ ತುಳು ಪಠ್ಯ ಪುಸ್ತಕವನ್ನು ರಚನೆ ಮಾಡಿದ್ದು ಅದರ ಬಿಡುಗಡೆ ಸಮಾರಂಭ ನಡೆದಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಈ ಬಗ್ಗೆ ಅರಿವಿಲ್ಲ. ತುಳು ಐಚ್ಚಿಕ ವಿಷಯವಾ ಅಥವಾ ಭಾಷಾ ವಿಷಯವಾ ಎಂಬುವುದರ ಬಗ್ಗೆ ಅರಿವಿಲ್ಲ. ಹಾಗಾಗಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಹಿರಿಯ ವಿದ್ವಾಂಸ ಪ್ರೊ. ಬಿ.ಎ ವಿವೇಕ್ ರೈ ಅವರು ತುಳು ಕಲಿಯುವುದರಿಂದ ಉದ್ಯೋಗ ಸಿಗುವುದಿಲ್ಲ ಎನ್ನುವ ಕೀಳರಿಮೆ ಬೇಡ. ನಮ್ಮ ಮಣ್ಣಿನ ಭಾಷೆಯಲ್ಲಿ ಪದವಿ ಪಡೆದು ಅನೇಕ ರೀತಿಯಲ್ಲಿ ವ್ಯಕ್ತಿತ್ವ ಬೆಳೆಸಿಕೊಳ್ಳಬಹುದು ಎಂದು ಹೇಳಿದರು. [ಬೈಟ್]
ಈ ಸಂದರ್ಭ ಅಕಾಡೆಮಿಯ ವತಿಯಿಂದ ಕುಲಪತಿಯವರನ್ನು ಪದವಿ ತುಳು ಪಠ್ಯ ರಚನಾ ಸಮಿತಿ ಅಧ್ಯಕ್ಷ ಪ್ರೊ. ಬಿ. ಶಿವರಾಮ ಶೆಟ್ಟಿ, ನಿರ್ವಾಹಕ ಸಂಪಾದಕ ಡಾ. ಪೂವಪ್ಪ ಕಣಿಯೂರು, ಕನ್ನಡ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ. ನಾಗಪ್ಪ ಗೌಡ ಅವರನ್ನು ಸನ್ಮಾನಿಸಲಾಯಿತು. ತುಳು ಪಠ್ಯ ಅನುಷ್ಠಾನಗೊಳಿಸುತ್ತಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಿನ್ಸಿಪಾಲ್ ರಾಜಶೇಖರ್ ಹೆಬ್ಬಾರ್ ಹಾಗೂ ತುಳು ಪಠ್ಯ ಸಂಪಾದಕ ಮಂಡಳಿ ಸದಸ್ಯರನ್ನು ಅಭಿನಂದಿಸಲಾಯಿತು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಪ್ರಭಾಕರ್ ನೀರುಮಾರ್ಗ, ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ, ತಾರನಾಥ ಗಟ್ಟಿ ಕಾಪಿಕಾಡ್, ಶಿವಾನಂದ್ ಕರ್ಕೇರಾ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *