Header Ads
Header Ads
Breaking News

ತುಳುಭವನದ ಸಿರಿ ಚಾವಡಿಯಲ್ಲಿ ಚಾವಡಿ ತಮ್ಮನ ಬೊಕ್ಕ ಪಾತೆರಕತೆ ಕಾರ್ಯಕ್ರಮ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಚಾವಡಿ ತಮ್ಮನ ಮತ್ತು ಪಾತೆರಕತೆ ಎಂಬ ಕಾರ್ಯಕ್ರಮವು ಉರ್ವಸ್ಟೋರ್‌ನ ತುಳುಭವನದ ಸಿರಿ ಚಾವಡಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ನಾಟಕ ನಿರ್ದೇಶಕ ಮತ್ತು ಬರಹಗಾರ ವಸಂತ ವಿ. ಅಮೀನ್ ಅವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ವಿನೂತನ ಕಾರ್ಯಕ್ರಮ ನಡೆಯುತ್ತಿದ್ದು, ತುಳುವಿನಲ್ಲಿ ಸಾಧನೆ ಮಾಡಿರುವ ವಿದ್ವಾಂಸರು, ಸಂಶೋಧಕರು, ಸಾಹಿತಿ ಮತ್ತು ಕಲಾವಿದರನ್ನು ಗುರುತಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದಾರೆ.ಮಂಗಳೂರಿನ ಉರ್ವಸ್ಟೋರ್‌ನ ತುಳುಭವನದ ಸಿರಿ ಚಾವಡಿಯಲ್ಲಿ ನಾಟಕ ನಿರ್ದೇಶಕ ಮತ್ತು ಬರಹಗಾರ ವಸಂತ ವಿ . ಆಮೀನ್ ಅವರನ್ನು ತುಳು ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಡಾ. ಸಂಜೀವ ದಂಡಕೇರಿ ಅವರು ಸನ್ಮಾನಿಸಿದರು.
ಇದೇ ವೇಳೆ ಮಾತನಾಡಿ ತುಳು ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಡಾ. ಸಂಜೀವ ದಂಡಕೇರಿ ಅವರು, ತುಳು ಸಾಹಿತ್ಯ ಅಕಾಡೆಮಿಗೆ ನಗುಮುಖದ ಅಧ್ಯಕ್ಷರು ಸಿಕ್ಕಿರುವುದು ನಮಗೆ ಹೆಮ್ಮೆ. ಅಲ್ಲದೆ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡು ಕಲಾವಿದರನ್ನು, ವಿದ್ವಾಂಸರನ್ನು ಗುರುತಿಸು ಕಾರ್ಯ ಮಹತ್ತರವಾದದು. ವಸಂತ ವಿ . ಆಮೀನ್ ಅವರ ಸಾಹಿತ್ಯ ಕೊಡುಗೆ ತುಳುನಾಡಿಗೆ ಅಪರೂಪ ಅದನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಇದೇ ವೇಳೆ ಮಾತನಾಡಿದ ಸನ್ಮಾನಿತರಾದ ವಸಂತ ವಿ . ಆಮೀನ್ ಅವರು ನನ್ನನ್ನು ಅಭಿಮಾನದಿಂದ ಸನ್ಮಾನಿಸಿದ್ದೀರ. ನನ್ನಂತಹ ಅದೇಷ್ಟೋ ಕಲಾವಿದರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ನಿರಂತರವಾಗಿ ನಡೆಯಲಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷ ವಹಿಸಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎ.ಸಿ ಭಂಡಾರಿಯವರು ಪ್ರತೀ ತಾಲೂಕಿನಲ್ಲಿ ತುಳು ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿಕೊಂಡು ಬರುತ್ತಿದ್ದೇವೆ. ಅಲ್ಲಿನ ತುಳು ಕಲಾವಿದರನ್ನು ಗುರುತಿಸುವ ಕಾರ್ಯ ತುಳು ಅಕಾಡೆಮಿಯಿಂದ ನಡೆಯುತ್ತಿದೆ ಎಂದು ಹೇಳಿದರು.ಈ ಸಂದರ್ಭ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಸಹಾಯಕ ನಿರ್ದೇಶಕ ನಾಗೇಶ್, ತುಳು ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕರಾದ ರಿಚರ್ಡ್ ಕ್ಯಾಸ್ಟಲಿನೊ, ರಿಜಿಸ್ಟ್ರಾರ್ ಚಂದ್ರಹಾಸ ರೈ.ಬಿ. ಮತ್ತು ತುಳು ಅಕಾಡೆಮಿಯ ಸದಸ್ಯರುಗಳು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *