Header Ads
Header Ads
Header Ads
Breaking News

ತುಳು ನೂತನ ನಾಟಕ ತಂಡ ’ಕಲಾಶ್ರೀ ಬೆದ್ರ’ದ ಉದ್ಘಾಟನೆ

ಮೂಡುಬಿದಿರೆ : ರಮೇಶ್ ಶೆಟ್ಟಿ ಮಿಜಾರು ಸಾರಥ್ಯದ ತುಳು ನೂತನ ನಾಟಕ ತಂಡ “ಕಲಾಶ್ರೀ ಬೆದ್ರ”ವು ಸಮಾಜ ಮಂದಿರದ ಬಯಲು ಕಲಾ ಮಂಟಪದಲ್ಲಿ ಉದ್ಘಾಟನೆಗೊಂಡಿತು.

ಮಾಜಿ ಶಾಸಕ ಕೆ.ಅಭಯಚಂದ್ರ ಜೈನ್ ಅವರು “ಕಲಾಶ್ರೀ ಬೆದ್ರ”ತಂಡವನ್ನು ಉದ್ಘಾಟಿಸಿ ಮಾತನಾಡಿ ತುಳು ನಾಟಕಗಳು ಕಲಾವಿದನಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸುವುದಲ್ಲದೆ ಜನರಿಗೆ ಮನರಂಜನೆಯ ಜೊತೆಗೆ ಉತ್ತಮ ಸಂದೇಶವನ್ನು ನೀಡುತ್ತವೆ ಎಂದು ಹೇಳಿದರು.

ತುಳು ರಂಗಭೂಮಿ, ರಿಯಾಲಿಟಿ ಶೋ ಹಾಗೂ ಚಿತ್ರರಂಗದಲ್ಲಿ ಹಾಸ್ಯನಟರಾಗಿ ಗುರುತಿಸಿಕೊಂಡಿರುವ, “ಕಲಾಶ್ರೀ ಬೆದ್ರ” ತಂಡದ ನಟರಾದ ಪ್ರವೀಣ್ ಮರ್ಕಮೆ, ನಿರಂಜನ್ ಎಸ್. ಕೊಂಡಾಣ, ಹಲವಾರು ನಾಟಕಗಳಿಗೆ ಸಂಗೀತ ನೀಡಿರುವ ತಂಡದ ಸದಸ್ಯ ಸುಧಾಕರ ಶೆಟ್ಟಿ, ಹಿರಿಯ ಕಲಾವಿದ ಹೊನ್ನಯ್ಯ ಮತ್ತು ವಿವಿಧ ನಾಟಕಗಳಲ್ಲಿ 25ಬಾರಿ ಬಣ್ಣ ಹಚ್ಚಿರುವ ತಂಡದ ಕಿರಿಯ ಕಲಾವಿದ ಸ್ವಪ್ನಾ ಎಸ್.ಕೋಟ್ಯಾನ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಜೆಡಿಎಸ್‌ನ ರಾಜ್ಯ ಕಾರ್ಯದರ್ಶಿ ತೋಡಾರು ದಿವಾಕರ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿ ಶುಭ ಹಾರೈಸಿದರು. ಪುರಸಭಾ ಸದಸ್ಯ ನಾಗರಾಜ ಪೂಜಾರಿ, ತೆಂಕಮಿಜಾರು ಗ್ರಾ.ಪಂ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಉದ್ಯಮಿಗಳಾದ ಗಣೇಶ್ ಶೆಟ್ಟಿ ಮತ್ತು ಗಣೇಶ್ ಕಾಮತ್ ಜಿ.ಕೆ ಅತಿಥಿಗಳಾಗಿ ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *