Header Ads
Header Ads
Breaking News

ತುಳು ರಂಗಭೂಮಿಗೆ ಲಹರಿ ಕುಸಲ್ದ ಕಲಾವಿದೆರ್ ನಾಟಕ ತಂಡ ಸೇರ್ಪಡೆ.

2003ರಲ್ಲಿ ಲಕುಮಿ ಎನ್ನುವ ನಾಟಕ ತಂಡವನ್ನು ಹುಟ್ಟುಹಾಕಿ ಅನೇಕ ನಾಟಕಗಳನ್ನು ಪ್ರದಶೀಸಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಕಲಾವಿದರು ತುಳು ನಾಡಿನಲ್ಲಿದ್ದಾರೆ ಅವರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ತುಳು ರಂಗಭೂಮಿಗೆ ಲಹರಿ ಕುಸಲ್ದ ಕಲಾವಿದೆರ್ ನಾಟಕ ತಂಡ ಸೇರ್ಪಡೆಯಾಗಿದೆ ಎಂದು ಹೇಳಿದರು.
ಇವರು ಮಂಗಳೂರಿನಲ್ಲಿ ಪ್ರತಿಕಾಗೋಷ್ಠಿ ನಡೆಸಿ ಮಾತನಾಡಿ ನಮ್ಮ ತುಳು ನಾಡಿನಲ್ಲಿ ಅನೇಕ ಕಲಾವಿದರಿದ್ದಾರೆ ಆದರೆ ಅವರಿಗೆ ಸರಿಯಾದ ವೇದಿಕೆ ಸಿಗುತ್ತಿಲ್ಲ. ಅವರಿಗೆಲ್ಲ ಉತ್ತಮ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಲಹರಿ ತಂಡವನ್ನು ಹುಟ್ಟು ಹಾಕಿದ್ದೇವೆ. ನಮ್ಮ ಲಕುಮಿ ಮತ್ತು ಶ್ರೀ ಲಲಿತೆ ತಂಡಕ್ಕೆ ಯಾವ ರೀತಿ ಪ್ರೋತ್ಸಾಹ ನೀಡಿದ್ದಿರೂ ಅದೇ ರೀತಿ ನಮ್ಮ ಈ ಹೊಸ ತಮಡಕ್ಕೂ ನೀಡಬೇಕು ಎಂದು ಹೇಳಿದರು.

ಬಳಿಕ ನಟ ಮಂಜು ರೈ ಮುಳೂರು ಮಾತನಾಡಿ ಲಕುಮಿ ಮತ್ತು ಶ್ರೀ ಲಲಿತೆ ತಂಡದಲ್ಲಿ ಅದೆಷ್ಟೂ ಕಲಾವಿದರು ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಈಗ ಲಹರಿ ತಂಡ ಸೇರಿಕೊಂಡಿದೆ ಈ ಮೂರು ತಂಡು ಲಯನ್ ಕಿಶೋರ್ ಡಿ.ಶೆಟ್ಟಿ ಸಾರತ್ಯದಲ್ಲಿ ಮುನ್ನಡೆಯುತ್ತಿದೆ. ಅನೇಕ ಕಲಾವಿದರು ನಮ್ಮ ಜೊತೆಯಿದ್ದಾರೆ. ಅವರಿಗೆಲ್ಲ ಉತ್ತಮ ವೇದಿಕೆ ಕಲ್ಪಿಸುವ ಕೆಲಸವಾಗುತ್ತಿದೆ. ಎಂದು ಹೇಳಿದರು.
ಈ ಸಂದರ್ಭ ಮೋಹನ್ ಕೊಪ್ಪಲ, ಗೋಕುಲ್ ಕದ್ರಿ, ಪ್ರಕಾಶ್ ಶೆಟ್ಟಿ ಧರ್ಮನಗರ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *