Header Ads
Header Ads
Breaking News

ತೂಮಿನಾಡಿನಲ್ಲಿ ಶಬರಿಮಲೆ ಪಾವಿತ್ರ್ಯತೆ ಉಳಿಸಲು ಶ್ರೀ ಅಯ್ಯಪ್ಪ ನಾಮಜಪ ಯಾತ್ರೆ

ಮಂಜೇಶ್ವರ: ತೂಮಿನಾಡು ಮಹಾಕಾಳಿ ದೈವಸ್ಥಾನದಿಂದ ಶಬರಿಮಲೆ ಶ್ರೀ ಧರ್ಮಶಾಸ್ತಾ ಕ್ಷೇತ್ರದ ಪಾವಿತ್ರ್ಯವನ್ನು ಉಳಿಸಿ ಎಂಬ ಹೋರಾಟದೊಂದಿಗೆ ತೂಮಿನಾಡು ಜಂಕ್ಷನ್ ತನಕ ಶ್ರೀ ಅಯ್ಯಪ್ಪ ನಾಮಜಪ ಯಾತ್ರೆ ನಡೆಯಿತು.ಅಯ್ಯಪ್ಪ ಸೇವಾ ಸಮಿತಿ ತೂಮಿನಾಡು ವತಿಯಿಂದ ಶ್ರೀ ಅಯ್ಯಪ್ಪ ನಾಮಜಪ ನಡೆದಿದೆ.

ಹರೀಶ್ ಶೆಟ್ಟಿ ಮಾಡ, ವಿಶ್ನೇಷ್, ರಾಜೇಶ್, ರಿತೇಶ್, ಪವನ್ ಮೊದಲಾದವರು ನಾಮಜಪ ಯಾತ್ರೆಗೆ ನೇತ್ರತ್ವ ನೀಡಿದರು.ಬಳಿಕ ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ ಶ್ರೀಕಾಂತ್‌ರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮದಲ್ಲಿ ಕೃಷ್ಣಾ ಶಿವಕೃಪಾ ಕುಂಜತ್ತೂರು ಮುಖ್ಯ ಪ್ರಭಾಷಣ ಮಾಡಿದರು.ಈ ಸಂದರ್ಭ ವೇದಿಕೆಯಲ್ಲಿ ಸಂಜೀವ ಶೆಟ್ಟಿ, ಹರೀಶ್ ಶೆಟ್ಟಿ, ಗುರುಸ್ವಾಮಿ ಪೂವಪ್ಪ ಮೊದಲಾದವರು ಉಪಸ್ಥರಿದ್ದರು.

Related posts

Leave a Reply