Header Ads
Header Ads
Breaking News

ತೆಂಕಿಲದ ದರ್ಖಾಸ್ ಗುಡ್ಡದಲ್ಲಿ ಶಾಶ್ವತವಾಗಿ ಮನೆ ನಿರ್ಮಾಣದ ಅವಕಾಶವನ್ನು ನಿರ್ಬಂಧಿಸಲಾಗಿದೆ : ಎಚ್.ಕೆ.ಕೃಷ್ಣಮೂರ್ತಿ ಹೇಳಿಕೆ

ಬಿರುಕು ಬಿಟ್ಟು ಅಪಾಯಕಾರಿಯಾಗಿ ಪರಿಣಮಿಸಿರುವ ತೆಂಕಿಲದ ದರ್ಖಾಸ್ ಗುಡ್ಡದಲ್ಲಿ ಶಾಶ್ವತವಾಗಿ ಮನೆ ನಿರ್ಮಾಣದ ಅವಕಾಶವನ್ನು ನಿರ್ಬಂಧಿಸಲಾಗಿದೆ. ಇಲ್ಲಿ ವಾಸ್ತವ್ಯವಿದ್ದು ಇದೀಗ ಸ್ಥಳಾಂತರಗೊಂಡಿರುವ 12 ಕುಟುಂಬಗಳಿಗೆ ಹೊಸದಾಗಿ ನಿವೇಶನವನ್ನು ನೀಡಲು ತಾಲೂಕು ಆಡಳಿತ ಮುಂದಾಗಿದೆ ಎಂದು ಪುತ್ತೂರು ಉಪವಿಭಾಗಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ತಿಳಿಸಿದ್ದಾರೆ.ಪುತ್ತೂರು ಉಪವಿಭಾಗಾಧಿಕಾರಿ ಅವರ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ತೆಂಕಿಲಗುಡ್ಡವನ್ನು ಪರಿಶೀಲನೆ ನಡೆಸಿ ಇದು ಅಪಾಯಕಾರಿ ವಲಯವಾಗಿದ್ದು, ಇಲ್ಲಿ ಭೂಕಂಪನ ಆಗುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ವಾಸ್ಯವ್ಯಕ್ಕೆ ಯೋಗ್ಯವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.ಈ ಸಂದರ್ಭ ಪುತ್ತೂರು ತಹಶೀಲ್ದಾರ್ ಅನಂತ ಶಂಕರ ಹಾಜರಿದ್ದರು.

Related posts

Leave a Reply

Your email address will not be published. Required fields are marked *