Breaking News

ತೈವಾನ್‌ನಲ್ಲಿ ನಡೆದ ಏಶಿಯನ್ ಜೂನಿಯರ್ ಕುಸ್ತಿ, ಭಾರತಕ್ಕೆ ಒಂದು ಚಿನ್ನ ಸೇರಿ ಮೂರು ಪದಕ

ಭಾರತದ ಕುಸ್ತಿಪಟುಗಳು ಜೂನಿಯರ್ ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ಭಾನುವಾರ ಮೂರು ಪದಕಗಳನ್ನು ಗೆದ್ದರು. ಇದರಲ್ಲಿ ಒಂದು ಚಿನ್ನ ಕೂಡ ಸೇರಿದೆ.
ತೈಚುಂಗ್, ತೈವಾನ್ ಪಂದ್ಯದ ಕೊನೆಯ ದಿನ ಶರ್ವಾನ್ ಚಿನ್ನ ಗೆದ್ದುಕೊಂಡರು. ಪುರುಷರ ೬೦ ಕೆಜಿ ಫ್ರೀಸ್ಟೈಲ್ ವಿಭಾಗದ ಫೈನಲ್ನಲ್ಲಿ ಅವರು ೯-೨ರಲ್ಲಿ ಇರಾನ್ನ ಯೋನೆಸ್ ಅಲಿಯಕಬರ್ ಎಮಮಿಚೊಗೈ ಅವರನ್ನು ಮಣಿಸಿದರು.
ಶರ್ವಾನ್ ಆರಂಭದಿಂದಲೇ ಸಂಪೂರ್ಣ ಸಾಮರ್ಥ್ಯದೊಂದಿಗೆ ಪೈಪೋಟಿ ನಡೆಸಿದರು. ದೀಪಕ್ ಪೂನಿಯಾ ೮೪ ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಬೆಳ್ಳಿ ಗೆದ್ದರು. ೬೬ ಕೆಜಿ ಫ್ರೀ ಸ್ಟೈಲ್ ವಿಭಾಗದಲ್ಲಿ ಕರಣ್ ಕಂಚು ಎತ್ತಿಹಿಡಿದರು.

Related posts

Leave a Reply