Header Ads
Breaking News

ತೊಕ್ಕೊಟ್ಟು ಫ್ಲೈಓವರ್ ತರಾತುರಿಯಲ್ಲಿ ಉದ್ಘಾಟನೆಗೊಳಿಸಿರುವ ಹಿಂದಿದೆ ಷಡ್ಯಂತ್ರ

ಉಳ್ಳಾಲ: ತೊಕ್ಕೊಟ್ಟು ಫ್ಲೈಓವರ್ ತುರಾತುರಿಯಲ್ಲಿ ಉದ್ಘಾಟನೆಗೊಳಿಸಿರುವ ಹಿಂದೆ ಷಡ್ಯಂತ್ರ ಇದೆ. ಸಮರ್ಪಕವಾಗಿ ಕಾಮಗಾರಿ ಮುಗಿಯದೆ ಉದ್ಘಾಟನೆ ನಡೆದ ದಿನದಂದೇ ಮೂರು ಅಪಘಾತಗಳು ನಡೆದು ಓರ್ವ ಗಾಯಾಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಸದಾಶಿವ ಉಳ್ಳಾಲ್ ಆರೋಪಿಸಿದರು.

ತೊಕ್ಕೊಟ್ಟುವಿನಲ್ಲಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಆಶ್ರಯದಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಫ್ಲೈಓವರ್ ಜನರಿಗೆ ಸುರಕ್ಷಿತವಾಗಿ ಪ್ರಯಾಣಿಸುವ ಉದ್ದೇಶದಿಂದ ಶಾಸಕರು, ಸಂಸದರು ಸಭೆ ನಡೆಸಿ ಸುರಕ್ಷಿತ ಕ್ರಮಗಳನ್ನು ಕೈಗೊಂಡ ಬಳಿಕ ಉದ್ಘಾಟನೆ ನಡೆಸಬೇಕಿತ್ತು. ಆದರೆ ಉಳ್ಳಾಲದತ್ತ ಹೋಗುವ ಸಮಸ್ಯೆ ಗಂಭೀರವಾಗಿದ್ದರೂ ತುರಾತುರಿಯಲ್ಲಿ ಸಂಸದರು ಉದ್ಘಾಟನೆ ನಡೆಸಿದ್ದಾರೆ. ಗುತ್ತಿಗೆದಾರರಿಗೆ ಬಿಲ್ ಪಾವತಿಗೆ ಸಹಕಾರಿಯಾಗುವಂತೆ ಉದ್ಘಾಟಿಸಲಾಯಿತೇ ಅನ್ನುವ ಸಂಶಯವಿದೆ. ಕೇಂದ್ರ ಸರಕಾರದ ಯೋಜನೆಯಾದರೂ, ರಾಜ್ಯ ಸರಕಾರದ ಪಾಲೂ ಕಾಮಗಾರಿಯಲ್ಲಿದೆ. ಜನರ ತೆರಿಗೆ ಹಣದಿಂದ ಕಾಮಗಾರಿ ನಡೆದಿದೆ ಎಂದ್ರು.
ಹೋರಾಟ ಸಮಿತಿ ಅಧ್ಯಕ್ಷ ಈಶ್ವರ್ ಉಳ್ಳಾಲ ಮಾತನಾಡಿ, ಫ್ಲೈಓವರ್ ಉದ್ಘಾಟನೆ ನಡೆಸಿದ ವಿಧಾನವೇ ಸರಿಯಿಲ್ಲ. ಎಲ್ಲರೂ ಜತೆಯಾಗಿ ಚರ್ಚಿಸಿಕೊಂಡು ಲೋಪಗಳಿರುವ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡ ಬಳಿಕ ಉದ್ಘಾಟಿಸಬೇಕಿತ್ತು. ಹಿಂದೆ ಅವೈ????ನಿಕ ಕಾಮಗಾರಿಗೆ ಮುಂದಾಗಿದ್ದ ಸಂಸ್ಥೆಯ ವಿರುದ್ಧ ಹೋರಾಡಿ ಜೈಲು ಪಾಲಾಗುವಷ್ಟರಲ್ಲಿ ಶಾಸಕರು ಹೋರಾಟಕ್ಕೆ ಬೆಂಬಲ ನೀಡಿದ ಫಲವಾಗಿ ಯೋಜನೆ ರೂಪುರೇಷೆ ಬದಲಾಗಿತ್ತು. ತುರಾತುರಿ ಉದ್ಘಾಟನೆಯ ಹಿಂದೆ ಗೋಲ್ ಮಾಲ್ ನಡೆದಿದೆ ಎಂದು ಆರೋಪಿಸಿದರು. ಈ ಸಂದರ್ಭ ಸ್ಥಳೀಯರಾದ ದಿನೇಶ್ ರೈ ಡೇನಿಸ್ ಡಿಸೋಜ, ಸುರೇಶ್ ಭಟ್ನಗರ, ಬಾಝಿಲ್ ಡಿಸೋಜ, ರಾಜು, ಇಫ್ತಿಕಾರ್ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *