Header Ads
Header Ads
Breaking News

ತೊಕ್ಕೊಟ್ಟು ರೈಲ್ವೇ ಹಳಿಯಲ್ಲಿ ಯುವಕನ ಬರ್ಬರ ಕೊಲೆ

ಉಳ್ಳಾಲ: ಯುವಕನೋರ್ವನನ್ನು ಬರ್ಬರವಾಗಿ ಚೂರಿಯಿಂದ ಹಲವು ಬಾರಿ ಇರಿದು ರೌಡಿಯೋರ್ವ ಹತ್ಯೆ ನಡೆಸಿ ತೊಕ್ಕೊಟ್ಟು ಕಕಾಪಿಕಾಡಿನಲ್ಲಿರುವ ಕೃಷಿ ಸಂಶೋಧನಾ ಕೇಂದ್ರದ ಎದುರುಗಡೆ ಎಸೆದು ಪರಾರಿಯಾಗಿರುವ ಘಟನೆ ನಿನ್ನೆ ತಡರಾತ್ರಿ ವೇಳೆ ನಡೆದಿದೆ. ತನ್ನ ಪ್ರಿಯತಮೆಗೆ ಕಿರುಕುಳ ನೀಡಿದನೆಂದು ಆರೋಪಿಸಿ ಎರಡು ಕೊಲೆಯತ್ನ ಪ್ರಕರಣಗಳಲ್ಲಿ ಭಾಗಿಯಾದ ರೌಡಿ ಕೊಲೆ ನಡೆಸಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಕಾಸರಗೋಡು ಪುತ್ತಿಗೆ ನಿವಾಸಿ ಸುದರ್ಶನ್ (20) ಹತ್ಯೆಯಾದ ಯುವಕ. ತೊಕ್ಕೊಟ್ಟು ನಿವಾಸಿ ಡಿ.ಕೆ. ರಕ್ಷಿತ್ ಕೃತ್ಯ ಎಸಗಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ತಡರಾತ್ರಿ 11 ರ ಸುಮಾರಿಗೆ ಕೆಂಪು ಬಣ್ಣದ ಕಾರಿನಲ್ಲಿ ಬಂದು ಸುದರ್ಶನ್ ಶವವನ್ನು ಕಾಪಿಕಾಡು ಬಳಿಯಿರುವ ಕೃಷಿ ಸಂಶೋಧನಾ ಕೇಂದ್ರದ ಎದುರುಗಡೆ ಬಿಸಾಡಿ ಪರಾರಿಯಾಗಿದ್ದಾರೆ. ರೌಡಿ ರಕ್ಷಿತ್ ಸುದರ್ಶನ್ ಮೃತದೇಹವನ್ನು ಎಸೆದು ಬಳಿಕ ಉಳ್ಳಾಲ ಪೆÇಲೀಸ್ ಠಾಣೆಗೆ ಕರೆ ಮಾಡಿ ವಿಚಾರ ತಿಳಿಸಿದ್ದಾನೆ ಎನ್ನಲಾಗಿದೆ. ತಾನು ರಕ್ಷಿತ್ ಎಂಬುದಾಗಿ ತಿಳಿಸಿ, ತನ್ನ ಪ್ರಿಯತಮೆಗೆ ಕಿರುಕುಳ ನೀಡುತ್ತಿದ್ದ. ಹಲವು ಬಾರಿ ಎಚ್ಚರಿಸಿದ್ದರೂ ಚಾಳಿ ಮುಂದುವರಿಸಿದ್ದನು. ಧಿಕ್ಕು ತೋಚದೆ ಹತ್ಯೆ ನಡೆಸಿ ಕಾಪಿಕಾಡು ಸಮೀಪ ಎಸೆದಿರುವೆ. ಇಂದು ತಮ್ಮ ಕೈಗೆ ಸಿಗುವುದಿಲ್ಲ. ಎನ್‍ಕೌಂಟರ್ ಮಾಡುವಿರಾ ಅನ್ನುವ ಸಂಶಯವಿದೆ. ತಾನೇ ಬಂದು ಸರೆಂಡರ್ ಆಗುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ. ತೊಕ್ಕೊಟ್ಟು ನಿವಾಸಿ ರಕ್ಷಿತ್ ಯಾನೆ ಡಿ.ಕೆ ರಕ್ಷಿತ್ 2014 ರಲ್ಲಿ ಕುಂಪಲ ನಿವಾಸಿ ಮುಖೇಶ್ ಕೊಲೆಯತ್ನ ಪ್ರಕರಣ ನಡೆಸಿ ಅಪರಾಧ ಜಗತ್ತಿಗೆ ಎಂಟ್ರಿ ಪಡೆದಿದ್ದ. ಬಳಿಕ 2016ರಲ್ಲಿ ಹಿಂ.ಜಾ ವೇ ಮುಖಂಡ ಯತೀಶ್ ಪೂಜಾರಿ ಹತ್ಯೆಯಲ್ಲಿ ಭಾಗಿಯಾಗಿದ್ದ ಲ್ಯಾನ್ಸಿ ಎಂಬಾತನನ್ನು ಚೆಂಬುಗುಡ್ಡೆ ಸಮೀಪ ಹತ್ಯೆಗೆ ಯತ್ನಿಸಿದ ಪ್ರಕರಣದಲ್ಲಿ ಆರೋಪಿಯಾಗಿ ಜೈಲುಪಾಲಾಗಿದ್ದನು. ಘಟನಾ ಸ್ಥಳಕ್ಕೆ ಎಸಿಪಿ ಕೋದಂಡರಾಮ್, ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ, ಭೇಟಿ ನೀಡಿ ಸ್ಥಳ ತನಿಖೆ ನಡೆಸಿ ಮೃತದೇಹವನ್ನು ಶವಮಹಜರಿಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

Related posts

Leave a Reply

Your email address will not be published. Required fields are marked *