Header Ads
Header Ads
Breaking News

ತೋಡಾರು ಯೆನೆಪೋಯದಲ್ಲಿ “ಪ್ರೋಗ್ರಾಮಿಂಗ್ ಸ್ಕಿಲ್ಸ್” ಕಾರ್ಯಾಗಾರ ಕಾಲೇಜಿನಲ್ಲಿ 2 ದಿನಗಳ ಕಾಲ ಕಾರ್ಯಾಗಾರ

 

ಮೂಡುಬಿದಿರೆಯ ತೋಡಾರಿನ ಯೆನೆಪೋಯ ಇನ್ಸ್‌ಟ್ಯೂಟ್ ಆಫ್ ಟೆಕ್ನಾಲಜಿ ಕಂಪ್ಯೂಟರ್ ಸೈನ್ಸ್, ಇನ್‌ಫಾರ್ಮೇಶನ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗ ವತಿಯಿಂದ “ಪ್ರೋಗ್ರಾಮಿಂಗ್ ಸ್ಕಿಲ್ಸ್” ಎಂಬ ವಿಷಯದ ಕುರಿತು 2 ದಿನದ ಕಾರ್ಯಾಗಾರವು ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ನಡೆಯಿತು. ಇನ್ನೂ ಕಾರ್ಯಗಾರವನ್ನು ತಾಂತ್ರಿಕ ತಜ್ಞ ರಾಮಾ.ಜಿ.ಶ್ರೀನಿವಾಸ್ ಉದ್ಘಾಟಿಸಿ, ಮಾತನಾಡಿದರು. ಈಗಷ್ಟೇ ವಿದ್ಯಾಭ್ಯಾಸ ಮುಗಿಸಿ ಯಾರು ಕಂಪನಿ ಕೆಲಸಕ್ಕೆ ಸೇರುತ್ತಾರೋ ಅವರಿಗೆ ಕೌಶಲ್ಯದ ಬಗ್ಗೆ ಜ್ಞಾನವಿರುವುದಿಲ್ಲ. ಅಂತಹವರಿಗೆ ಅವರ ಸಮಸ್ಯೆಗಳನ್ನು ಅರಿತುಕೊಂಡು ಮೂಲಭೂತ ಕೌಶಲ್ಯದ ಬಗ್ಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ಈ ವೇಳೆ ಕಾಲೇಜಿನ ಪ್ರಾಂಶುಪಾಲ ಡಾ|ಆರ್.ಜಿ. ಡಿ”ಸೋಜ ಅಧ್ಯಕ್ಷತೆಯನ್ನು ವಹಿಸಿದ್ದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಹೆಚ್.ಒ.ಡಿ ಪ್ರೊ.ಗುರುಪ್ರಸಾದ್, ಇನ್‌ಫಾರ್ಮೇಶನ್ ಸೈನ್ಸ್ ವಿಭಾಗದ ಹೆಚ್.ಒ.ಡಿ ಪ್ರೊ.ಪಾಂಡು ನಾಯಕ್ ಉಪಸ್ಥಿತರಿದ್ದರು.