Header Ads
Header Ads
Breaking News

ತೌಡುಗೋಳಿ ಕ್ರಾಸ್-ಮುಡಿಪು ರಸ್ತೆ ಅಗಲೀಕರಣಕ್ಕೆ ಶಿಲಾನ್ಯಾಸ

12.50 ಕೋಟಿ ಅನುದಾನದ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದ್ದು, ಜನಪ್ರತಿನಿಧಿಗಳು ಸಹಕಾರ ನೀಡಿದ್ದು ಊರವರ ಸಂಪೂರ್ಣ ಸಹಕಾರ ನೀಡಿದಾಗ ಉತ್ತಮ ರಸ್ತೆ ನಿರ್ಮಾಣ ಸಾಧ್ಯ ಎಂದು ಶಾಸಕ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ತೌಡುಗೋಳಿ ಅಡ್ಡರಸ್ತೆಯಿಂದ ಮುಡಿಪು ನವೋದಯ ವಿದ್ಯಾಲಯವರೆಗೆ ನಡೆಯಲಿರುವ ರಸ್ತೆ ಅಗಲೀಕರಣ ಕಾಮಗಾರಿಗೆ ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೋಟೆಕಾರ್, ಬೀರಿ, ಸೋಮೇಶ್ವರ, ದರ್ಗಾ ರಸ್ತೆಗೆ ನಾಲ್ಕು ಕೋಟಿ ಅನುದಾನ, ಮುಡಿಪು- ಪಾತೂರು ರಸ್ತೆ, ಪಜೀರ್ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿಗೆ ಒಂದು ಕೋಟಿ ಬಿಡುಗಡೆಗೊಂಡಿದೆ. ಇತರ ರಸ್ತೆಗಳ ಅಭಿವೃದ್ಧಿಗೆ ಎಪೆಂಡಿಕ್ಸ್ ಇಯಲ್ಲಿ 20 ಕೋಟಿ ಅನುದಾನ ಬಿಡುಗಡೆಗೊಂಡಿದ್ದರೂ ಈಗಿನ ಸರ್ಕಾರ ತಡೆ ಹಿಡಿದಿದ್ದು ಈ ಬಗ್ಗೆ ಲೋಕೋಪಯೋಗಿ ಸಚಿವರಲ್ಲಿ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು.

ಹಿರಿಯಾದ ಇಬ್ರಾಹಿಂ ಮತ್ತು ಜನಾರ್ದನ ಗಟ್ಟಿ ಕೌಡೂರು ಗುದ್ದಲಿ ಪೂಜೆ ನೆರವೇರಿಸಿದರು. ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಸದಸ್ಯ ಹೈದರ್ ಕೈರಂಗಳ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *