Header Ads
Breaking News

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಮಳೆಯ ಅನಾಹುತ- ಪುತ್ತೂರಿನ ಗೋಳಿಕಟ್ಟೆಯಲ್ಲಿ ಕಾಪೌಂಡ್ ಹಾಲ್ ಬಿದ್ದು ಮಹಿಳೆ ಸಾವು

ದ. ಕ ಜಿಲ್ಲೆಯಲ್ಲಿ ಇಂದು ಮತ್ತೊಂದು ಅನಾಹುತ ಸಂಭವಿಸಿದೆ. ಕಂಪೌಡ್ ಒಂದು ಬಿದ್ದು ಮಹಿಳೆ ಸಾವನ್ನಪ್ಪಿದ ಘಟನೆ ಪುತ್ತೂರಿನ ಪರ್ಲಡ್ಕ ಗೋಳಿಕಟ್ಟೆ ಎಂಬಲ್ಲಿ ನಡೆದಿದೆ. ಮಹಿಳೆಯು ಮನೆಯ ಹಿಂದೆ ಬದಿಯಲ್ಲಿ ಬೀಡಿ ಕಟ್ಟುತ್ತಿದ್ದ ಸಂದರ್ಭದಲ್ಲಿ ಜೋರಾಗಿ ಬೀಸಿದ ಗಾಳಿ ಮಳೆಗೆ ನಿಷುಮ ಪಾರೂಕ್ ಎಂಬವರ ಕಂಪೌಂಡ್ ಜರಿದು ಅನಾಹುತ ಸಂಭವಿಸಿದೆ. ವಸಂತಿ ಯಾನೆ ಶೋಭಾ ಎಂಬವರು ಮೃತ ಮಹಿಳೆಯಾಗಿದ್ದಾರೆ. ಅಗ್ನಿಶಾಮಕ ದಳ, ಪೊಲೀಸ್ ಹಾಗೂ ಸ್ಥಳೀಯರಿಂದ ತೆರವು ಕಾರ್ಯಾಚರಣೆ ನಡೆಯಿತು. ಸ್ಥಳಕ್ಕೆ ಶಾಸಕರಾದ ಸಂಜೀವ ಮಠಂದೂರ್, ಸಹಾಯಕ ಆಯುಕ್ತರಾದ ಯತೀಶ್ ಉಳ್ಳಾಲ್, ತಹಶೀಲ್ದಾರ್ ರಮೇಶ್ ಬಾಬು, ವಿಧಾನ ಪರಿ?ತ್ ಸದಸ್ಯ ಪ್ರತಾಪ ಸಿಂಹ ಅಗ್ನಿಶಾಮಕ ದಳ, ಡಿ ವೈ ಯಸ್ ಪಿ. ದಿನಕರ್ ರೈ ಮತ್ತಿತರರ ಅಧಿಕಾರಿಗಳು ಭೇಟಿ ನೀಡಿದ್ರು.

Related posts

Leave a Reply

Your email address will not be published. Required fields are marked *