Header Ads
Breaking News

ದಡ್ಡಲಕಾಡು ಜಗದಾಂಬಿಕಾ ಶ್ರೀ ಮಹಮ್ಮಾಯಿ ಕ್ಷೇತ್ರದಲ್ಲಿ ಅಖಂಡ ನವಾಹ ಭಜನಾ ಸಂಕೀರ್ತನೆ

ಬಂಟ್ವಾಳ: ಮೂಡನಡುಗೋಡು ಗ್ರಾಮದ ದಡ್ಡಲಕಾಡು ದೇವಿನಗರದ ಶ್ರೀ ಜಗದಾಂಬಿಕಾ ಶ್ರೀ ಮಹಮ್ಮಾಯಿ ಗುಳಿಗ ಅಣ್ಣಪ್ಪ ಕ್ಷೇತ್ರದಲ್ಲಿ ಲೋಕಕಲ್ಯಾಣಾರ್ಥವಾಗಿ ಅಖಂಡ ನವಾಹ ಭಜನಾ ಸಂಕೀರ್ತನೆ ಹಾಗೂ ಪ್ರತಿಷ್ಠಾ ವರ್ಧಂತ್ಯುತ್ಸವದ ಅಂಗವಾಗಿ 58ನೇ ವರ್ಷಾವಧಿ ಮಹೋತ್ಸವ, ಸಾಮೂಹಿಕ ನವಚಂಡಿಕಾಯಾಗ ರಂಗಪೂಜೆ ಹಾಗೂ ಮಾರಿಪೂಜೆ ಉತ್ಸವ ವಿಜ್ರಂಭಣೆಯಿಂದ ನಡೆಯಿತು.
ಬಂಟ್ವಾಳದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಆರಂಭಗೊಂಡ ಹಸಿರು ಹೊರೆಕಾಣಿಕೆ ಮೆರವಣಿಗೆಗೆ ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಚಾಲನೆ ನೀಡಿದರು. ಬಣದ ಕೊಡೆ, ಕಲಶ ಹೊತ್ತ ಮಹಿಳೆಯರು, ಚೆಂಡೆ ವಾದನ, ಗೊಂಬೆ ಕುಣಿತ ಮೆರವಣಿಗೆಗೆ ವಿಶೇಷ ಆಕರ್ಷಣೆ ನೀಡಿತು. ಮಾಣಿಲ ಶ್ರೀಗಳು ಸ್ವತಃ ಹೊರೆಕಾಣಿಕೆ ಹೊತ್ತು ಗಮನ ಸೆಳೆದರು. ಅಖಂಡ ನವಾಹ ಭಜನಾ ಸಂಕೀರ್ತನೆಗೆ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಶ್ರೀಗಳೇ ಭಜನಾ ಸಂಕೀರ್ತನೆಯಲ್ಲಿ ಭಾಗಿಗಳಾದರು.

Related posts

Leave a Reply

Your email address will not be published. Required fields are marked *