Header Ads
Header Ads
Breaking News

ದಡ್ಡಲಕಾಡು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ನೂತನ ಮಂತ್ರಿಮಂಡಲ ರಚನೆ

ಬಂಟ್ವಾಳ: ದಡ್ಡಲಕಾಡು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲಾ ಮಂತ್ರಿಮಂಡಲದ ನೂತನ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಇತರ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಶಾಲೆಯಲ್ಲಿ ನಡೆಯಿತು.

ಮುಖ್ಯಮಂತ್ರಿಯಾಗಿ ಗೌತಮ್, ಉಪಮುಖ್ಯಮಂತ್ರಿಯಾಗಿ ಚಿರಾಗ್, ಗೃಹಸಚಿವರಾಗಿ ಸಾತ್ವಿಕ್, ಶಿಕ್ಷಣ ಮಂತ್ರಿಯಾಗಿ ಶ್ವೇತಾ, ಆಹಾರ ಖಾತೆ ಸಚಿವರಾಗಿ ಪ್ರಣೀತ್, ಕ್ರೀಡಾ ಸಚಿವರಾಗಿ ವಿಮರ್ಶ್, ಸಾಂಸ್ಕೃತಿಕ ಮಂತ್ರಿಯಾಗಿ ರಕ್ಷಾ ಎ., ಆರೋಗ್ಯ ಸಚಿವರಾಗಿ ಗಗನ್, ನೀರಾವರಿ ಸಚಿವರಾಗಿ ತನುಶ್, ವಾರ್ತಾ ಸಚಿವೆಯಾಗಿ ವಿನುತ, ಸ್ವಚ್ಚತಾ ಮಂತ್ರಿಯಾಗಿ ರಶ್ಮಿತಾ ಪ್ರಮಾಣ ವಚನ ಸ್ವೀಕರಿಸಿದರು. ಹಿತೇಶ್ ವಿರೋಧ ಪಕ್ಷದ ನಾಯಕನಾಗಿ ಹಾಗೂ ರಶ್ಮಿತಾ ಸಭಾಪತಿಯಾಗಿ ಆಯ್ಕೆಯಾದರು.


ಬೆಳಿಗ್ಗೆ ಅಸೆಂಬ್ಲಿಯಲ್ಲಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಹಿಲ್ಡಾ ಫೆರ್ನಾಂಡೀಸ್ ನೂತನ ಸಚಿವರಿಗೆ ಪ್ರಮಾಣ ವಚನ ಭೋದಿಸಿದರು. ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಸದಸ್ಯ ಪುರುಷೋತ್ತಮ ಅಂಚನ್, ಕರಾಟೆ ತರಬೇತುದಾರ ಅಶೋಕ್ ಆಚಾರ್ಯ, ಸಹಶಿಕ್ಷಕರಾದ ಉಮಾವತಿ, ಅನಿತಾ, ಎಲ್ವಿರಾ ದೀಪ, ವೇದಾವತಿ, ಭಾಗ್ಯಲಕ್ಷ್ಮಿ, ಜಯ, ಜಯಲೀಲಾ, ಲಲಿತಾ, ಭಾರತಿ, ಅಶ್ವಿನಿ, ಕುಮಾರಿ, ದಿವ್ಯ, ಅಶ್ವಿನಿ, ಲಿಖಿತಾ, ಭವ್ಯ ಹಾಜರಿದ್ದರು. ಕಳೆದ ಸೋಮವಾರ ಶಾಲೆಯಲ್ಲಿ ಪ್ರಜಾತಂತ್ರ ಮಾದರಿಯಲ್ಲಿ ಚುನಾವಣೆ ನಡೆಸಿ ಚುನಾವಣೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ ಕೊಡಲಾಗಿತ್ತು.

Related posts

Leave a Reply

Your email address will not be published. Required fields are marked *