Header Ads
Breaking News

ದಯನೀಯ ಸ್ಥಿತಿಯಲ್ಲಿ ದೀನೀ ಕಲಿಸಿದ ಯುವತಿ : ದಾನಿಗಳ ನಿರೀಕ್ಷೆಯಲ್ಲಿ ಹಿಫ್ಲುಲ್ ಕುರಾನ್ ಅಧ್ಯಾಪಕಿ

ತನ್ನ ಬಗಲಲ್ಲಿ ಎರಡು ಪುಟ್ಟಕಂದಮ್ಮಗಳೊಂದಿಗೆ ದಯನೀಯ ಸ್ಥಿತಿಯಲ್ಲಿ ಕುಳಿತಿರುವ ಈ ಯುವತಿ ಸಲ್ಮಾ. ಮೂಲತಃ ಚಿಕ್ಕಮಗಳೂರು ಜಿಲ್ಲೆ ಎನ್.ಆರ್ ಪುರದವರು. 

ಮನೆಯವರೇನೂ ಸಲ್ಮಾಗೆ ಮದುವೆ ಮಾಡಿಕೊಟ್ಟಿದ್ದರು. ಆದರೆ ವಿಧಿ ನೋಡಿ ಎರಡು ಮಕ್ಕಳಾದ ಬಳಿಕ ಗಂಡನೂ ಇವರನ್ನು ತಿರುಗಿ ನೋಡದ ಪರಿಸ್ಥಿತಿ. ಈ ಕುಟುಂಬ ದಯನೀಯ ಸ್ಥಿತಿಯಲ್ಲಿದ್ದು ದಾನಿಗಳ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..

ತನ್ನ ಪುಟ್ಟ ಕಂದಮ್ಮಗಳನ್ನು ಸಾಕಲೆಂದು ಕಳೆದ ಹಲವು ವರ್ಷಗಳಿಂದ ಮಂಗಳೂರಿನ ವಿವಿಧೆಡೆ ಹಿಫ್ಲುಲ್ ಕುರಾನ್ ಸ್ಕೂಲ್‍ಗಳಲ್ಲಿ ಪುಟ್ಟ ಮಕ್ಕಳಿಗೆ ಕುರಾನ್ ಹೇಳಿ ಕೊಡುತ್ತಾ ಜೀವನ ಸಾಗಿಸುತ್ತಿದ್ದರು. ಕೆಲಸವಿಲ್ಲದ ಕೆಲವು ಸಂದರ್ಭದಲ್ಲಿ ಇಸ್ಲಾಮಿಕ್ ಸಂಸ್ಥೆಗಳಲ್ಲಿ ಮಕ್ಕಳಿಗೆ ಅಡಿಗೆ ಮಾಡಿಕೊಟ್ಟು ತನ್ನ ಮತ್ತು ಮಕ್ಕಳ ಹೊಟ್ಟೆ ತುಂಬಿಸಿದ್ದಳು ಈ ಸ್ವಾಭಿಮಾನಿ ಯುವತಿ ಸಲ್ಮಾ.

ಈಕೆಯ ತಂದೆ ಕ್ಯಾನ್ಸರ್ ಬಾಧಿತರಾಗಿದ್ದು, ಕೊನೆಯ ಹಂತದಲ್ಲಿದ್ದಾರೆ. ಸ್ವಂತಕ್ಕೊಂದು ಸೂರು ಇಲ್ಲದ ಈಕೆ ಮತ್ತು ಈಕೆಯ ತಂದೆ ತಾಯಿ ಬಾಡಿಗೆಯ ಮನೆಯಲ್ಲಿ ದಿನ ದೂಡುತ್ತಿದ್ದಾರೆ. ಎಷ್ಟೇ ಸಂಕಷ್ಟ ಬಂದರೂ ಯಾರ ಮುಂದೆಯೂ ಕೈ ಚಾಚದ ಇವರು ಸ್ವಯಂ ದುಡಿದೇ ತನ್ನ ರೋಗಪೀಡಿತ ತಂದೆ ತಾಯಿ ಮತ್ತು ಮಕ್ಕಳನ್ನು ಸಾಕುತ್ತಿದ್ದಳು. ಇದೀಗ ತನ್ನ ಎರಡೂ ಕಿಡ್ನಿಗಳನ್ನು ಕಳೆದುಕೊಂಡ ಬಳಿಕ ಸಲ್ಮಾಳಿಗೆ ದಿಕ್ಕೇ ತೋಚದಂತಾಗಿದೆ. ತನ್ನ ಹಿರಿಯ ಮಗಳನ್ನು ಕಾಸರಗೋಡಿನ ಮುಹಿಮ್ಮಾತ್ ಎಂಬ ಸಂಸ್ಥೆಯಲ್ಲಿ ಸೇರಿಸಿದರೆ ಕಿರಿಯ ಮಗನನ್ನು ಮಂಜನಾಡಿಯ ಅಲ್ ಮದೀನಾದಲ್ಲಿ ದಾಖಲಿಸಿದ್ದಾರೆ. ತಾಯಿಯ ನೆರಳಿನಲ್ಲಿ ಬಾಳಿ ಬದುಕಬೇಕಿದ್ದ ಪುಟ್ಟ ಕಂದಮ್ಮಗಳೆರಡು ಇಸ್ಲಾಮಿಕ್ ಸಂಸ್ಥೆಗಳ ನೆರಳಿನಲ್ಲಿ ಬದುಕುತ್ತಿದೆ. ಇದೆಲ್ಲದರ ನಡುವೆ ಮತ್ತೊಂದು ಸಂಕಷ್ಟಕ್ಕೆ ಗುರಿಯಾಗಿರುವ ಸಲ್ಮಾ ಈ ಹಿಂದಿನಂತೆ ದುಡಿಯಲಾಗದೆ ಆಸ್ಪತ್ರೆ ಸೇರಿದ್ದಾಳೆ. ನಿರಂತರ ಡಯಾಲಿಸಿಸ್ ಇಲ್ಲವೇ ಕಿಡ್ನಿ ಬದಲಾವಣೆಯೇ ಉಳಿದಿರುವ ದಾರಿ ಎಂದಿದ್ದಾರೆ ಡಾಕ್ಟರ್ಗಳು. ಹಲವು ಸಮಸ್ಯೆಗಳಿಂದ ಜರ್ಜರಿತವಾದ ಸಲ್ಮಾ ಇದೀಗ ನಿಮ್ಮ ನೆರವಿನ ನಿರೀಕ್ಷೆಯಲ್ಲಿದ್ದಾಳೆ. ಸದಾ ಕಷ್ಟಗಳನ್ನೇ ಅನುಭವಿಸುತ್ತಾ ಬಂದಿರುವ ಈಕೆಗೆ ಇಂದು ದಾನಿಗಳ ನೆರವಿನ ಅಗತ್ಯವಿದ್ದು, ಸಹೃದಯಿ ದಾನಿಗಳು ಈ ಬಡ ಅದ್ಯಾಪಕಿಗೆ ನೆರವಾಗಬೇಕಿದೆ.
ಬ್ಯಾಂಕ್ ಖಾತೆ ಸಂಖ್ಯೆ 0333104000117654

IDBI Bank Chikmagalur Branch

IFSC Code: IBKL0000333 ಜಮೆ ಮಾಡಿ ನೆರವಾಗಿ..

Related posts

Leave a Reply

Your email address will not be published. Required fields are marked *