Header Ads
Header Ads
Breaking News

ದರೆಗುಡ್ಡೆಯಲ್ಲಿ “ಚೆಂಡು ಹೂವು ಕೃಷಿ” ಕಾರ್ಯಾಗಾರ : ಕಾರ್ಯಕ್ರಮದಲ್ಲಿ ಚೆಂಡು ಹೂವು ಗಿಡಗಳ ವಿತರಣೆ

ರಾಜ್ಯ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿ.ವಿ ಬೀದರ್, ಕೃಷಿ ವಿಜ್ಞಾನ ಕೇಂದ್ರ ದ.ಕ ಮಂಗಳೂರು, ಕರ್ನಾಟಕ ಕೃಷಿ ಬೆಲೆ ಆಯೋಗ ಪ್ರಾಯೋಜಿತ “ರೈತರ ಆದಾಯ ಹಾಗೂ ಕಲ್ಯಾಣ ವೃದ್ಧಿ” ಯೋಜನೆಯ ಅಡಿಯಲ್ಲಿ “ಚೆಂಡು ಹೂವು ಕೃಷಿ” ಕಾರ್ಯಾಗಾರವು ದರೆಗುಡ್ಡೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆಯಿತು. ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ/ಪ್ರಕಾಶ್ ಕಮ್ಮರಡಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ ಗ್ರಾಮಗಳಲ್ಲಿ ಕೃಷಿಯನ್ನು ಕುಟುಂಬ ಪದ್ಧತಿಯಂತೆ ನೋಡಿಕೊಂಡರೆ ಉತ್ತಮ. ಸಹಕಾರ ಮನೋಭಾವದಿಂದ ಕೆಲಸ ಮಾಡಿದಾಗ ಯಾವುದೇ ರೀತಿಯ ಕಷ್ಟ ನಷ್ಟಗಳನ್ನು ಎದುರಿಸಿ ಯಶಸ್ಸು ಗಳಿಸಲು ಸಾಧ್ಯ. ಎಂದರು. ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ.ತೇಜಸ್ವಿನಿ ಪ್ರಕಾಶ್ ರೈತರಿಗೆ ಚೆಂಡು ಹೂಗಿಡಗಳನ್ನು ವಿತರಿಸಿದ್ರು. ಈ ಸಂದರ್ಭ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ರಮೇಶ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಂಪತ್ ಸಾಮ್ರಾಜ್ಯ, ಮೂಡುಬಿದಿರೆ ಎಂಸಿಎಸ್ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂಗ್ರಾ.ಪಂಚಾಯತ್ ಅಧ್ಯಕ್ಷೆ ಯಮುನಾ, ಉಪಾಧ್ಯಕ್ಷ ಮುನಿರಾಜ ಹೆಗ್ಡೆ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *