Header Ads
Header Ads
Breaking News

ದಾನಧರ್ಮ ಗೈಸ್ ವತಿಯಿಂದ 8ನೇ ವರ್ಷದ ಸೌಹಾರ್ದ ಇಫ್ತಾರ್ ಕೂಟ

ಮಂಗಳೂರು ಸೆಂಟ್ರಲ್ ಮಾರ್ಕೆಟ್‌ನ ಬೀದಿ ಬದಿ ಹಣ್ಣು ಹಂಪಲು ವ್ಯಾಪಾರಸ್ಥರ ಯುವಕ ಸಂಘಟನೆಯಾದ ದಾನ ಧರ್ಮ ಗೈಸ್ ವತಿಯಿಂದ 8ನೇ ವರ್ಷದ ಸೌಹಾರ್ದ ಇಫ್ತಾರ್ ಕೂಟ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್‌ನಲ್ಲಿ ನಡೆಯಿತು.

ಉಸ್ತುವಾರಿ ಸಚಿವ ಯು.ಟಿ ಖಾದರ್ ಸೌಹಾರ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿ, ದಾನ ಧರ್ಮ ಗೈಸ್ ಸಂಘಟನೆ ಸಣ್ಣಪುಟ್ಟ ವ್ಯಾಪಾರ ಮಾಡುವ ಜೊತೆಗೆ ಇಂತಹ ಸೌಹಾರ್ದ ಇಫ್ತಾರ್ ಕೂಟ ಆಯೋಜಿಸುವ ಮೂಲಕ ಎಲ್ಲಾ ಸಂಘನೆಗಳಿಗೆ ಮಾದರಿಯಾಗಿದೆ. ನನಗೆ ರಂಝಾನ್‌ನಲ್ಲಿ ಬಹಳಷ್ಟು ಬೇರೆ ಬೇರೆ ಇಫ್ತಾರ್ ಕೂಟಕ್ಕೆ ಅಹ್ವಾನ ಇದ್ದರೂ ಈ ಬಡ ವ್ಯಾಪಾರಸ್ಥರ ಆಯೋಜಿಸುವ ಕೂಟಕ್ಕೆ ಎರಡು ವರ್ಷಗಳಿಂದ ತಪ್ಪದೇ ಭಾಗವಹಿಸುತ್ತಿದೆನೆ ಎಂದು ಹೇಳಿದರು. 

ಎಸ್‌ಡಿಪಿಐ ಮುಖಂಡ ಇಲ್ಯಾಸ್ ಮುಹಮ್ಮದ್ ತುಂಬೆ ಮಾತನಾಡಿ, ಮಾರುಕಟ್ಟೆಯಲ್ಲಿ ತುಂಬಾ ಜನಸಂಖ್ಯೆ ಇದ್ದರು ಸುಮಾರು ೮ವರ್ಷಗಳಿಂದ ಉತ್ತಮ ರೀತಿಯಲ್ಲಿ ಕೂಟವನ್ನು ಅಯೋಜಿಸಿದೆ. ಇದು ಬೇರೆಲ್ಲಾ ಸಂಘಟನೆಗೆ ಪ್ರೇರಣೆಯಾಗಿದೆ ಎಂದ್ರು.
ಇನ್ನು ಈ ಸಂದರ್ಭ ಮಂಗಳೂರು ತಾ.ಪಂ ಅಧ್ಯಕ್ಷ ಮೊಹಮ್ಮದ್ ಮೋನು, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಅಝೀಝ್, ಎಸ್‌ಡಿಪಿಐ ರಾಜ್ಯ ಪ್ರ.ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಬೆಳ್ಮ ಗ್ರಾ.ಪಂ ಉಪಾಧ್ಯಕ್ಷ ಬಿ.ಎಂ. ಸತ್ತಾರ್, ಸ್ಥಳೀಯ ಮಸೀದಿ ಇಮಾಂ ಆಫ್ರೂಝ್ ನೂರಿ, ದಾನ ಧರ್ಮ ಸಂಸ್ಥೆಯ ಪ್ರಮುಖರಾದ ನೂರುದ್ದೀನ್ ಕುದ್ರೋಳಿ, ಹಾರೀಸ್ ದೇರಳಕಟ್ಟೆ, ಶಾಕೀರ್ ಪರಂಗಿಪೇಟೆ, ಉಮರಬ್ಬ ಸಾಲೇತ್ತೂರು, ಹರ್ಷದ್ ಕುದ್ರೋಳಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *