Header Ads
Breaking News

ದಿನದ 24 ಗಂಟೆ ನೀರು ಸರಬರಾಜಾಗ್ತಾ ಇದ್ದ ಆ ಊರಲ್ಲಿ ನೀರಿಗಾಗಿ ಪರದಾಟ

ಆ ಊರಿನ ಜನತೆ ತಮ್ಮ ಹೊಟ್ಟೆಪಾಡಿಗಾಗಿ ಕೂಲಿ ಕೆಲ್ಸಕ್ಕೆ ಹೋದ್ರೆ ನೀರಿಲ್ಲ. ನೀರು ಬೇಕು ಅಂತ ಮನೆಯಲ್ಲೇ ಉಳಿದ್ರೆ ಹೊಟ್ಟೆಗೆ ಹಿಟ್ಟಿಲ್ಲ. ದಿನದ 24 ಗಂಟೆ ನೀರು ಸರಬರಾಜಾಗ್ತಾ ಇದ್ದ ಆ ಊರಲ್ಲಿ ಇದೀಗ ದಿನಕ್ಕೆ ಕೇವಲ ಒಂದು 1 ಗಂಟೆ ಮಾತ್ರ ನೀರು ಸರಬರಾಜಾಗ್ತಾ ಇದೆ. ಇದ್ರಿಂದಾಗಿ ಇಲ್ಲಿನ ಜನತೆ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಅಷ್ಟಕ್ಕೂ ಆ ಊರು ಯಾವುದು..? ಅವರ ಈ ಸಮಸ್ಯೆಗೆ ಕಾರಣವೇನು.. ಈ ವರದಿ ನೋಡಿ…
ಇದು ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮಪಂಚಾಯತ್ ವ್ಯಾಪ್ತಿಯ ನಕ್ರೆ ದೇವರಗುಡ್ಡ ಕಾಲೋನಿ ನಿವಾಸಿಗಳ ಅಳಲು. ನಕ್ರೆ ಭಾಗದ 5 ಸೆನ್ಸ್ ಕಾಲೋನಿ, ದೇವರಗುಡ್ಡ ಕಾಲೋನಿ ಹೀಗೆ ನಕ್ರೆ ಪರಿಸರದ ನಿವಾಸಿಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಇಲ್ಲಿನ ಇನ್ನೂರಕ್ಕೂ ಅಧಿಕ ಮನೆಗಳಿಗೆ ನೀರು ಪೂರೈಸಲು ಇರುವುದು ಒಂದು ಕೊಳವೆ ಬಾವಿ, ಒಂದು ಪಂಪ್ಸೆಟ್ ಒಂದು ಟ್ಯಾಂಕ್ ಮಾತ್ರ. ನೀರು ಪೂರೈಕೆಯಲ್ಲಿ ಇದೀಗ ಅಡಚಣೆಯಾಗುತ್ತದೆ. ಶಿಥಿಲ ಟ್ಯಾಂಕ್ ಸೋರುತ್ತಿರುವ ಪರಿಣಾಮ ಪಂಪ್‍ನಿಂದ ನೇರ ಪೈಪ್‍ಗಳಿಗೆ ಸಂಪರ್ಕ ನೀಡಲಾಗಿದೆ. 60ರಿಂದ 70 ಮನೆಗೆ ಟ್ಯಾಂಕ್ ನಿಂದ ನೀರು ಒಂದು ಗಂಟೆ ನೀರು ಹರಿಸಲಾಗುತ್ತದೆ. ಉಳಿದಡೆ ಪಂಪ್‍ನಿಂದ ನೇರ ಸಂಪರ್ಕವಿದೆ.
ನಕ್ರೆ ಭಾಗದ ಶೇಕಡ 40ರಷ್ಟು ಕಡೆಗೆ ಇಲ್ಲಿಂದಲೇ ನೀರು ಸರಬರಾಜು ಆಗುತ್ತಿತ್ತು ಒಂದು ಕೊಳವೆಬಾವಿ ಕಡಿಮೆ ಸಾಮಥ್ರ್ಯದ ಪಂಪ್ ಒಡೆದು ಎಲ್ಲೆಡೆ ಪೂರೈಕೆಯಾಗುತ್ತಿಲ್ಲ. ಟ್ಯಾಂಕ್ ಶುದ್ಧಗೊಳಿ ಸದೆ ವರ್ಷಗಳು ಹಿಡಿದಿವೆ. ಟ್ಯಾಂಕ್ ಸ್ವಚ್ಛಗೊಳಿಸಲು ಟ್ಯಾಂಕ್ ನಿಂದ ನೀರು ತೊಳೆದು ಹೊರಬಿಡುವ ಪೈಪ್ ಬ್ಲಾಕ್ ಆಗಿ ನೀರು ಹೊರಗೆ ಹೋಗುತ್ತಿಲ್ಲ. ಟ್ಯಾಂಕ್ ತೊಳೆಯದೇ ನೀರು ಹರಿಸುತ್ತಲೇ ಇರುವುದರಿಂದ ಕೊಳಕು ನೀರು ಬಳಕೆ ಅನಿವಾರ್ಯವಾಗಿದೆ. ಅಲ್ಲದೆ ಇಲ್ಲಿನ ಕೆಲವರು ಮಾತ್ರ ನೀರಿನ ಬಿಲ್ಲನ್ನು ಕಟ್ಟುತ್ತಾರೆ. ಇನ್ನುಳಿದವರು ಇಲ್ಲಿಯ ಪ್ರಭಾವಿ ವ್ಯಕ್ತಿಗಳ ಪ್ರಭಾವ ಬಳಸಿಕೊಂಡು ಬಿಲ್ಲನ್ನು ಕಟ್ಟದೆ ನೀರನ್ನು ಕೃಷಿಗೆ ಉಪಯೋಗಿಸುತ್ತಾರೆ. ಎಂದು ಇಲ್ಲಿಯ ಸ್ಥಳೀಯ ನಿವಾಸಿ ಜೈ ಶಂಕರ್ ಮಾಧ್ಯಮ ಅವರೊಂದಿಗೆ ಹೇಳಿದರು.


ಈಗಾಗಲೇ ಈ ಟ್ಯಾಂಕ್ ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿದೆ. ಇದರ ಪಕ್ಕದಲ್ಲಿ ಆಟದ ಮೈದಾನ ಇದ್ದು ಅಪಾಯದ ಭೀತಿ ಎದ್ದುಕಾಣುತ್ತದೆ. ಹೊಸ ನೀರಿನ ಟ್ಯಾಂಕ್ ನಿರ್ಮಾಣದ ಬಗ್ಗೆ ನಿರಂತರ ಹೋರಾಟ ನಡೆಸಿದ್ದೇವೆ. ನಕ್ರೆ ಭಾಗದ ನೀರಿನ ಸಮಸ್ಯೆ ಬಗೆಹರಿಯದಿದ್ದರೆ ಪಂಚಾಯತ್ ಮುಂದೆ ಶೀಘ್ರ ಧರಣಿ ನಡೆಸಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಪ್ಪನಕ್ರೆ ಮಾಧ್ಯಮ ತಿಳಿಸಿದರು.ಒಟ್ಟಿನಲ್ಲಿ ಈ ಭಾಗದ ಜನರ ಸಮಸ್ಯೆ ಇನ್ನಾದ್ರೂ ಬಗೆಹರಿಯುತ್ತಾ ಅನ್ನೋದನ್ನು ಕಾದುನೋಡಬೇಕಿದೆ.

Related posts

Leave a Reply

Your email address will not be published. Required fields are marked *