Header Ads
Header Ads
Breaking News

ದಿನಾಂಕ-ಇಸವಿ ಹೇಳಿದರೆ ತಟ್ಟನೆ ವಾರದ ಹೇಸರೇಳುವ ಅಪರೂಪದ ವ್ಯಕ್ತಿ

ಅದೇಷ್ಟೇ ಹಳೆಯದ್ದೇ ಆಗಿರಲಿ.. ಇಲ್ಲ 200 ವರ್ಷಕ್ಕೂ ಮುಂದಿನ ಹೊಸ ವರ್ಷಗಳೇ ಆಗಿರಲೀ.. ದಿನಾಂಕ-ಇಸವಿ ಹೇಳಿದರೆ ಯಾವುದೇ ಲೆಕ್ಕಾಚಾರಗಳಿಗೆ ಅವಕಾಶವೇ ಇಲ್ಲದಂತೆ, ತಟ್ಟನೆ ವಾರದ ಹೆಸರೇಳುವ ಬಲು ಅಪರೂಪದ ಶಿರ್ವ ಗ್ರಾಮದ ವ್ಯಕ್ತಿಯೋರ್ವರು ಪಡುಬಿದ್ರಿಗೆ ಬಂದಿದ್ದು, ಅವರ ಪ್ರತಿಭೆ ಕಂಡು ಬೆರಗಾದ ಸಾರ್ವಜನಿಕರು ಅವರನ್ನು ಸುತ್ತುವರಿದ್ದು ಅವರನ್ನು ವಿವಿಧ ರೀತಿಯಲ್ಲಿ ಪ್ರಶ್ನಿಸುತ್ತಿರುವುದು ಕಂಡು ಬಂತು.

ಶಿರ್ವ ಗ್ರಾಮದ ಅವಿವಾಹಿತ ಅಂತೋಣಿ ಲೋಬೋ(51) ವರ್ಷದ ವ್ಯಕ್ತಿಯೇ ಈ ಅಪರೂಪದ ಬುದ್ಧಿಶಕ್ತಿ ಹೊಂದಿರುವ ವ್ಯಕ್ತಿ. ಇವರು ಮಣಿಪಾಲದ ಹೋಟೆಲೊಂದರಲ್ಲಿ ವೈಟರ್ ಕೆಲಸ ಮಾಡಿಕೊಂಡಿದ್ದು, ಇವರು ಶಿರ್ವದ ಖಾಸಗಿ ಶಾಲೆಯೊಂದರಲ್ಲಿ10 ತರಗತಿಯ ವರಗೆ ವಿದ್ಯಾಭ್ಯಾಸ ಮಾಡಿದ ಇವರು, ಏಳನೇ ತರಗತಿಯಲ್ಲಿ ಕಲಿಯುತ್ತಿರುವಾಗಲೇ ಈ ಬಗ್ಗೆ ಆಸಕ್ತಿ ಹೊಂದಿ ಶಾಲಾ ರಜಾ ದಿನಗಳೆಷ್ಟು ಸರ್ಕಾರಿ ಸಿಬ್ಬಂದಿಗಳು ದುಡಿಯುವ ದಿನಗಳೇಷ್ಟು ಎಂಬುದನ್ನು ಲೆಕ್ಕ ಹಾಕಿದಾಗ ಅವರ ಲೆಕ್ಕಾಚಾರಕ್ಕೆ ದೊರಕಿದ್ದು, ಎಲ್ಲಾ ಹಬ್ಬ ಹರಿದಿನಗಳ ರಜೆಗಳನ್ನು ಕಳೆದಾಗ ದುಡಿಮೆಯ ದಿನ ವರ್ಷದಲ್ಲಿ ಕೇವಲ ಏಳು ತಿಂಗಳು ಮಾತ್ರ ಎನ್ನುತ್ತಾರೆ ಅಂತೋಣಿ ಲೋಬೋ, ಇದೇ ಲೆಕ್ಕಾಚಾರವನ್ನು ಮುಂದುವರಿಸಿದಾಗ ನನಗೆ ಈ ವಿಚಾರದಲ್ಲಿ ಆಸಕ್ತಿ ಬಂದು ಸತತ ಅಭ್ಯಾಸದಿಂದಾಗಿ, ಯಾವುದೇ ತಾರೀಕು ಇಸವಿ ಹೇಳಿದರೆ ವಾರದ ಹೆಸರನ್ನು ಹೇಳುವಷ್ಟು ಸಾಧನೆ ನನ್ನಲಿದೆ, ಇದರ ಹಿಂದೆ ನಾನು ಸತತ ಅಭ್ಯಾಸ ಬಿಟ್ಟರೆ ಹೆಚ್ಚೇನು ಸಾಧನೆಯನ್ನು ಮಾಡಿಲ್ಲ, ಇದು ದೇವರು ನನಗೆ ಕೊಟ್ಟ ವರವೂ ಗೊತ್ತಿಲ್ಲ ತಪ್ಪಿಲ್ಲದೆ ಅದೇಷ್ಟೇ ಹಳೆಯ ವರ್ಷಗಳಿರ ಬಹುದು, ಇಲ್ಲ ಮುಂದಿನ ಇನ್ನೂರಕ್ಕೂ ಅಧಿಕ ಹೊಸ ವರ್ಷಗಳೇ ಆಗಿರ ಬಹುದು, ದಿನಾಂಕ-ಇಸವಿ ಹೇಳಿದರೆ ತಟ್ಟನೆ ವಾರದ ಹೆಸರನ್ನು ಹೇಳುವೆ, ಯಾವುದೇ ಲೆಕ್ಕಾಚಾರ ಇದರಲ್ಲಿಲ್ಲ ನಾನು ಮೊಬೈಲ್ ಕೂಡ ಉಪಯೋಗಿಸುವುದಿಲ್ಲ ಎನ್ನುತ್ತಾರೆ. ಉಡುಪಿಯಲ್ಲಿ ವಿದ್ಯಾರ್ಥಿಗಳು ನನ್ನನ್ನು ಕಂಡು ಈ ಬಗ್ಗೆ ಪ್ರಶ್ನಿಸುತ್ತಿದ್ದಾಗ ಪಡುಬಿದ್ರಿಯ ಯುವಕರನೇಕರು ನನ್ನನ್ನು ಪಡುಬಿದ್ರಿಗೆ ಕರೆ ತಂದಿದ್ದಾರೆ, ಈ ವರೆಗೂ ನನ್ನನ್ನು ಯಾವುದೇ ವೇದಿಕೆ ಗುರುತಿಸಿಲ್ಲ ಎಂಬ ನೋವು ನನಗಿದೆ ಎನ್ನುತ್ತಾರೆ.

Related posts

Leave a Reply