Header Ads
Breaking News

ದಿ. ಕಾರ್ತಿಕ್ ಮೇರ್ಲ ಸ್ಮರಣಾರ್ಥ ಬಸ್ ತಂಗುದಾಣ ಲೋಕಾರ್ಪಣೆ

ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂ ಜಾಗರಣಾ ವೇದಿಕೆ ಪುತ್ತೂರು ತಾಲೂಕು ಕಾರ್ಯದರ್ಶಿಯಾಗಿದ್ದ ದಿ.ಕಾರ್ತಿಕ್ ಮೇರ್ಲ ಅವರ ಸ್ಮರಣಾರ್ಥ ಸಂಪ್ಯದಲ್ಲಿ ಸಾರ್ವಜನಿಕ ಬಸ್ ತಂಗುದಾಣ ನಿರ್ಮಾಣವಾಗಿದ್ದು ಕಾರ್ತಿಕ್ ಮೇರ್ಲ ಅವರ ತಂದೆ ರಮೇಶ್ ಸುವರ್ಣ, ತಾಯಿ ಹೇಮಾವತಿ ಅವರು ಲೋಕಾರ್ಪಣೆ ಮಾಡಿದರು.

ಬಸ್ ತಂಗುದಾಣವನ್ನು ಲೋಕಾರ್ಪಣೆಗೊಂಡ ಬಳಿಕ ಹಿಂದೂ ಜಾರಣಾ ವೇದಿಕೆ ಕ್ಷೇತ್ರಿಯ ಸಂಪರ್ಕ ಪ್ರಮುಖ್ ಜಗದೀಶ್ ಕಾರಂತ್ ಅವರು ಮಾತನಾಡಿ ಒಂದು ವರ್ಷದ ಹಿಂದೆ ನಮ್ಮ ಆತ್ಮೀಯ ಮಿತ್ರ, ಸಂಘಟನೆಯ ಸಹಕಾರಿ, ಹಿಂದುತ್ವದ ಹೋರಾಟಗಾರ ಕಾರ್ತಿಕನನ್ನು ನಾವು ಕಳೆದು ಕೊಂಡೆವು. ಆ ಕಾರ್ಯಕರ್ತನ ಸ್ಮರಣಾರ್ಥ ಒಂದು ಶಾಶ್ವತವಾದಂತಹ ಸ್ಮರಣಾರ್ಥ ಕಟ್ಟಡದ ಲೋಕಾರ್ಪಣೆ ಆಗಿದೆ. ಇಲ್ಲಿನ ಕಾರ್ಯಕರ್ತರ ಪರಿಶ್ರಮದಿಂದ ಈ ಕಟ್ಟಡ ಎದ್ದು ನಿಲ್ಲಲು ಕಾರಣವಾಗಿದೆ ಎಂದರು.

ಕಾರ್ತಿಕ್ ಮೇರ್ಲ ಸ್ಮರಣಾರ್ಥ ಸಾರ್ವಜನಿಕ ಬಸ್ ತಂಗುದಾಣ ಉದ್ಘಾಟನೆಯ ಜೊತೆಗೆ ಉಚಿತ ಆಯುಷ್ಮಾನ್ ಕಾರ್ಡ್ ಯೋಜನೆ ರೂಪಿಸಲಾಗಿದ್ದು, ಸುಮಾರು 300ಕ್ಕೂ ಅಧಿಕ ಮಂದಿ ಉಚಿತ ಆಯುಷ್ಮಾನ್ ಕಾರ್ಡ್ ಮಾಡಿಸಿಕೊಂಡರು. ಕಾರ್ತಿಕ್ ಮೇರ್ಲ ಅವರ ತಂದೆ ರಮೇಶ್ ಸುವರ್ಣ ಅವರು ಸಾಂಕೇತಿಕವಾಗಿ ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್ ವಿತರಿಸಿದರು.ಈ ಸಂದರ್ಭ ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಬಿಜೆಪಿ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ನಗರ ಮಂಡಲದ ಅಧ್ಯಕ್ಷರಾಗಿರುವ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *