Header Ads
Breaking News

ಡಿ.8ರಂದು ಪಣಂಬೂರು ಬೀಚ್‌ನಲ್ಲಿ ನಡೆಯಲಿರುವ ಡಾಗ್ ವಾಕ್ : ‘ದಿ ಗ್ರೇಟ್ ಇಂಡಿಯನ್ ಡಾಗ್ ವಾಕ್’ ಆಯೋಜನೆ

ಸ್ಥಳೀಯ ನಾಯಿಗಳಿಗೆ ಕೂಡಾ ಪ್ರೋತ್ಸಾಹ ನೀಡಬೇಕು ಎನ್ನುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಮಂಗಳೂರು ಸೂಪರ್ ಸಂತೆ ಹಾಗೂ ಅನಿಮಲ್ ಕೇರ್ ಟ್ರಸ್ಟ್ ಸಹಯೋಗದಲ್ಲಿ ‘ದಿ ಗ್ರೇಟ್ ಇಂಡಿಯನ್ ಡಾಗ್ ವಾಕ್’ ಆಯೋಜಿಸಿದ್ದಾರೆ. ಡಿಸೆಂಬರ್ ೮ರಂದು ಪಣಂಬೂರು ಬೀಚ್‌ನಲ್ಲಿ ಡಾಗ್ ವಾಕ್ ಶೋ ನಡೆಯಲಿದೆ.

ಡಿಸೆಂಬರ್ ೮ರಂದು ಸಂಜೆ 6.30ರಿಂದ ಭಾನುವಾರ ಪಣಂಬೂರು ಬೀಚಿನಲ್ಲಿ ನಡೆಯುವ ಈ ಡಾಗ್ ವಾಕ್‌ನಲ್ಲಿ ಮೂರು ವಿಭಾಗ ಮಾಡಿಕೊಳ್ಳಲಾಗಿದೆ. 1ರಿಂದ 7 ವರ್ಷದೊಳಗಿನ ಗಂಡು, ಹೆಣ್ಣು ನಾಯಿಗಳೂ, 7 ವರ್ಷ ಮೇಲ್ಪಟ್ಟ ನಾಯಿಗಳು ಹಾಗೂ ಅಂಗವೈಕಲ್ಯ ಹೊಂದಿರುವ 1 ವರ್ಷ ಮೇಲ್ಪಟ್ಟ ನಾಯಿಗಳು. ಕಡ್ಡಾಯವಾಗಿ ದೇಸಿ ನಾಯಿಗಳು ಹಾಗೂ ಕ್ರಾಸ್ ಬ್ರೀಡ್‌ನ ನಾಯಿಗಳಿಗೆ ಮಾತ್ರವೇ ಈ ಅವಕಾಶ ಇದೆ. ನಾಯಿಗಳನ್ನು ನೋಂದಾಯಿಸಿ, ಕರೆತರುವವರು ಸ್ಟೇಜ್‌ನಲ್ಲಿ ನಾಯಿಗಳೊಂದಿಗೆ ನಡೆದು ಬರಬೇಕು, ಆ ನಾಯಿ ಬಗ್ಗೆ ಒಂದು ನಿಮಿಷ ನಿರೂಪಕರು ವಿವರಣೆ ನೀಡಿದ ಬಳಿಕ ಇಳಿದು ಬರುವುದು, ಇದು ಡಾಗ್‌ವಾಕ್ ಕಾರ್ಯಕ್ರಮದ ಚಿತ್ರಣ.ಕಡಿಮೆ ರೋಗದ, ಸ್ಥಳೀಯ ಹವಾಗುಣಗಳಿಗೆ ಹೊಂದಿಕೊಂಡು ಬದುಕುವ ಕನಿಷ್ಠ ಆಹಾರ ಬಯಸುವ ಈ ನಾಯಿಗಳಿಗೆ ಡಾಗ್‌ಶೋಗಳಲ್ಲಿ ಎಂಟ್ರಿ ಇರುವುದಿಲ್ಲ. ಅಲ್ಲಿ ಏನಿದ್ದರೂ ದೇಸಿ ನಾಯಿಗಳದ್ದೇ ಹವಾ. ಆದರೆ ನಗರದಲ್ಲಿ ಎಷ್ಟೋ ಮಂದಿ ಇಂತಹ ದೇಸಿ ನಾಯಿಗಳನ್ನು ಸಾಕುವ ಮಂದಿ ಇದ್ದಾರೆ.

v

ನಾಯಿಗಳನ್ನು ಡಾಗ್‌ವಾಕ್‌ಗೆ ಕರೆ ತರಬಯಸುವವರು ನಂ.9900404971 ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬೇಕು. ನಾಯಿಗಳ ಫೋಟೊ ನೀಡಬೇಕು. ಇದರಲ್ಲಿ ನಾಯಿ ದತ್ತು ಸ್ವೀಕರಿಸಿದವರಷ್ಟೇ ಅಲ್ಲ, ದೇಸಿ ನಾಯಿ ಹೊಂದಿರುವ ಯಾರೇ ಆದರೂ ಭಾಗವಹಿಸಬಹುದು.

Related posts

Leave a Reply

Your email address will not be published. Required fields are marked *